• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ದೊಡ್ಡ ಪಕ್ಷವಾದರೆ ನಿತೀಶ್ ಕುಮಾರ್‌ಗೆ ಕಂಟಕ?

|

ಪಾಟ್ನಾ, ನವೆಂಬರ್ 10: ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದೆ.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   ಆರಂಭದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಒಂದೊಮ್ಮೆ ಎನ್‌ಡಿಎ ಗೆಲುವು ಸಾಧಿಸಿದರೆ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆಗೆ ಬಿಜೆಪಿ ಹಾರಿಕೆ ಉತ್ತರ ನೀಡಿದೆ.

   Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

   ಬೆಳಗ್ಗೆ 11.30ರ ಸಮಯದವರೆಗೆ ನಡೆದ ಮತಎಣಿಕೆಯನ್ನು ಬಿಜೆಪಿಯು ಮುನ್ನಡೆ ಸಾಧಿಸಿದೆ. ಮತ ಎಣಿಕೆ ಮುಂದುವರೆದಿದೆ.

   ಸಂಜೆಯೊಳಗೆ ಬಿಹಾರ ಚುನಾವಣೆ ಕುರಿತು ಅಂತಿಮ ಫಲಿತಾಂಶ ಹೊರಬರಲಿದೆ. ಸರ್ಕಾರ ರಚನೆ ಹಾಗೂ ನಾಯಕತ್ವ ಕುರಿತು ಬಳಿಕ ನಿರ್ಧಾರ ಮಾಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕ ಕೈಲಾಶ್‌ ವಿಜಯವರ್ಗೆ ತಿಳಿಸಿದ್ದಾರೆ.

   ಈ ಮೂಲಕ ನಾಯಕತ್ವ ಬದಲಾವಣೆಯಾದರೂ ಯಾವುದೇ ಆಶ್ಚರ್ಯವಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ. ಹಾಗಿದ್ದರೆ ಪ್ರಧಾನಿ ಭರವಸೆ ಬಗ್ಗೆ ಪ್ರಶ್ನಿಸಿದಾಗ, ಮತ್ತು ಉಳಿಸಿಕೊಳ್ಳುತ್ತೇವೆ ಎಂದೂ ತಿಳಿಸಿದ್ದಾರೆ.

   ಈ ಮೂಲಕ ಬಿಜೆಪಿಯೂ ಸರ್ಕಾರ ರಚನೆಯನ್ನು ಸುಲಭವಾಗಿ ಮಾಡಲು ಬಿಡುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಸರ್ಕಾರದಲ್ಲಿ ದೊಡ್ಡ ಪಾಲು ಪಡೆಯುವ ತಂತ್ರವೂ ಇರಬಹುದು. ಒಟ್ಟಿನಲ್ಲಿ ಈ ಬಾರಿ ಎನ್‌ಡಿಎ ಗೆದ್ದರೆ ಬಿಹಾರವು ಕೇವಲ ನಿತೀಶ್ ರಾಜ್ಯವಾಗಿರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

   English summary
   Bihar Election Results 2020: Bihar Nitish Kumar's dream of returning as Chief Minister of Bihar now appears to depend entirely on the largesse of his ally, the BJP. At 11.30 am, the party had the most seats in Bihar, where votes are still being counted.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X