• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ ಮಾಜಿ ಡಿಸಿಎಂ ಮೋದಿ

|

ಪಾಟ್ನಾ, ನ. 27: ಬಿಹಾರದಲ್ಲಿ ನಿತೀಶ್ ಸರ್ಕಾರ್ 7.0 ಸಂಪುಟಕ್ಕೆ ಹಿರಿಯ ಬಿಜೆಪಿ ಮುಖಂಡ ಸುಶೀಲ್ ಮೋದಿ ಸೇರ್ಪಡೆಯಾಗುತ್ತಿಲ್ಲ,ದೆಹಲಿಗೆ ತೆರಳಲಿದ್ದಾರೆ ಎಂಬ ಮಾತಿಗೆ ಇದೀಗ ನಿಜವಾಗುತ್ತಿದೆ. ಇದೇ ಮೊದಲ ಬಾರಿಗೆ ಡಿಸಿಎಂ ಹುದ್ದೆಯಿಂದ ಮುಕ್ತರಾಗಿರುವ ಸುಶೀಲ್ ಮೋದಿ ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ್ದಾರೆ.

ರಾಜ್ಯಸಭೆಯ ಒಂದು ಸ್ಥಾನಕ್ಕಾಗಿ ನಡೆಯಲಿರುವ ಉಪ ಚುನಾವಣೆಗೆ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರನ್ನು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಸುಶೀಲ್ ಮೋದಿಗೆ ದಕ್ಕದ ಡಿಸಿಎಂ ಸ್ಥಾನ, ಕೇಂದ್ರಕ್ಕೆ ಬುಲಾವ್?

ಅಕ್ಟೋಬರ್ 8ರಂದು ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ)ದ ಸ್ಥಾಪಕ, ಎಲ್ ಜೆಪಿ ಏಕೈಕ ಸಂಸದ ರಾಮ್ ವಿಲಾಸ್ ಪಾಸ್ವಾನ್ ನಿಧನರಾದರು. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ ಜೆಪಿಯನ್ನು ಅವರ ಪುತ್ರ ಚಿರಾಗ್ ಪಾಸ್ವಾನ್ ಮುನ್ನಡೆಸಿದರು.

ರಾಜ್ಯಸಭೆ ಉಪ ಚುನಾವಣೆಗೆ ನವೆಂಬರ್ 26ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಡಿಸೆಂಬರ್ 14ರಂದು ಮತದಾನ ಹಾಗೂ ನಂತರ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ವರ್ಷ ರಾಜ್ಯಸಭಾ ಸ್ಥಾನಕ್ಕೆ ಪಾಸ್ವಾನ್ ಅವರು ಆಯ್ಕೆಯಾಗಿದ್ದರು. 2019ರಲ್ಲಿ ರವಿಶಂಕರ್ ಪ್ರಸಾದ್ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಾನ ಖಾಲಿಯಾಗಿತ್ತು. ಈಗ ಪಾಸ್ವಾನ್ ಅವರಿಂದ ತೆರವಾದ ಸ್ಥಾನ ತುಂಬಲು ಸುಶೀಲ್ ಮೋದಿ ಸಜ್ಜಾಗಿದ್ದಾರೆ.

English summary
Former Bihar deputy chief minister Sushil Kumar Modi has been named as BJP's candidate for the Rajya Sabha bypoll from Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X