ಜೆಡಿಯು ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಆಪ್ತ ಆರ್‌ಸಿಪಿ ಸಿಂಗ್ ಆಯ್ಕೆ
ಜೆಡಿಯು ನೂತನ ಅಧ್ಯಕ್ಷರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ ಆರ್‌ಸಿಪಿ ಸಿಂಗ್ ಆಯ್ಕೆಯಾಗಿದ್ದಾರೆ.
ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಇತ್ತೀಚೆಗೆ ಪಕ್ಷದ ಆರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದ ವಿಷಯ ಸೇರಿದಂತೆ ಪಕ್ಷ ಮುಂದೆ ತೆಗೆದುಕೊಳ್ಳಬಹುದಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.
ನಿತೀಶ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಆರ್ ಸಿಪಿ ಸಿಂಗ್ ಹೆಸರನ್ನು ಪ್ರಸ್ತಾಪಿಸಿದ್ದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಇತರ ಸದಸ್ಯರು ಇದನ್ನು ಅನುಮೋದಿಸಿದರು ಎಂದು ಹಿರಿಯ ಮುಖಂಡರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2019ರಲ್ಲಿ ಜೆಡಿಯು ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದ ನಿತೀಶ್ ಕುಮಾರ್ ಆರ್ ಸಿಪಿ ಸಿಂಗ್ ಅವರಿಗಾಗಿ ಹುದ್ದೆಯನ್ನು ತ್ಯಜಿಸಿದ್ದರು. ಆರ್ ಸಿಪಿ ಸಿಂಗ್ ಇಲ್ಲಿಯವರೆಗೆ ಪ್ರಾದೇಶಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ನೆರೆಯ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯೂ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹಿರಿಯ ನಾಯಕ ತಿಳಿಸಿದ್ದಾರೆ.












Click it and Unblock the Notifications