ಕೊರೊನಾ ಸೋಂಕು ಹೆಚ್ಚಳ: ಬಿಹಾರದಲ್ಲಿ ಸೆಪ್ಟೆಂಬರ್‌ 6ರ ವರೆಗೆ ಲಾಕ್‌ಡೌನ್ ವಿಸ್ತರಣೆ

ಪಾಟ್ನಾ, ಆಗಸ್ಟ್ 17: ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಸೆಪ್ಟೆಂಬರ್ 6ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ.

ಬಿಹಾರ ರಾಜ್ಯದಲ್ಲಿ ಕೊವಿಡ್ -19 ರ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇಲಿನ ಸೂಚನೆಗಳಂತೆ ಎಂಎಚ್ಎ ಯಿಂದ ನೀಡಲ್ಪಟ್ಟ ಆದೇಶದ ಪ್ರಕಾರ, ಈ ಇಲಾಖೆಯು ಹೊರಡಿಸಿರುವ ನಿರ್ಬಂಧಗಳು ವೈಡ್ ಮೆಮೋ ಸಂಖ್ಯೆ 102/f4.F.31t ದಿನಾಂಕ 30.7.2020 ರಂತೆ ದಿನಾಂಕ 06.09.2020 ರವರೆಗೆ ಹೆಚ್ಚಿನ ನಿರ್ಬಂಧಗಳನ್ನು ಹೇರುವಿಕೆ ಮುಂದುವರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಅನ್ ಲಾಕ್ 3.0 ಮಾರ್ಗಸೂಚಿಗಳ ಪ್ರಕಾರ, ವೈರಸ್ ಹರಡುವುದನ್ನು ತಡೆಗಟ್ಟಲು ಕಂಟೈನ್‌ಮೆಂಟ್ ವಲಯಗಳು ಮತ್ತು ಅಗತ್ಯವೆಂದು ಪರಿಗಣಿಸಲಾದ ಇತರ ಪ್ರದೇಶಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

Bihar Government Extends Lockdown Till September 6

ಆದರೂ ಕೂಡ ಈ ಮೊದಲು ರಾಜ್ಯದಲ್ಲಿ ಅನುಮತಿಸಲಾಗಿದ್ದ ಎಲ್ಲಾ ಅಗತ್ಯ ಮತ್ತು ಇತರ ಸೇವೆಗಳನ್ನು ಹೊಸ ವಿಸ್ತೃತ ಲಾಕ್‌ಡೌನ್ ಅಡಿಯಲ್ಲಿ ಸಹ ಅನುಮತಿಸಲಾಗುತ್ತದೆ. ಲಾಕ್ ಡೌನ್ ಸಮಯದಲ್ಲಿ ಅನುಸರಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿತ್ತು.

ಇಂಟರ್ನೆಟ್ ಸೇವಾ ಪೂರೈಕೆದಾರರು, ಬ್ರಾಡ್‌ಬ್ಯಾಂಡ್ ಮತ್ತು ಕೇಬಲ್ ಸೇವೆಗಳು ಸಹ ಕಾರ್ಯನಿರ್ವಹಿಸಬಹುದು. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಸೇವೆಗಳಿಗೆ ಅನುಮತಿ ನೀಡಲಾಗುವುದು.

ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಅವಕಾಶವಿದೆ. ಅಗತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶವಿದೆ.

ರೆಸ್ಟೋರೆಂಟ್‌ಗ ಹೋಂ ಡೆಲಿವರಿಯನ್ನು ಅನುಮತಿಸಲಾಗುತ್ತದೆ, ಹೋಟೆಲ್‌ಗಳು, ಲಾಡ್ಜ್ ಗಳನ್ನು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.ಟ್ಯಾಕ್ಸಿಗಳು ಮತ್ತು ಆಟೋಗಳು ರಸ್ತೆಗಳಲ್ಲಿ ಸಂಚರಿಸುತ್ತವೆ.

ಬಿಹಾರದ ಕೊವಿಡ್ -19 ಪ್ರಕರಣಗಳ ಸಂಖ್ಯೆ ಭಾನುವಾರ 1.04 ಲಕ್ಷಕ್ಕೆ ಏರಿದೆ. ಒಂದೇ ದಿನ 2,187 ಜನರು ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+