ಬಿಹಾರದಲ್ಲಿ ಫಲಿತಾಂಶಕ್ಕೂ ಮೊದಲೇ ಸಿಹಿಲಾಡು ಸಿದ್ಧ!

ಪಾಟ್ನಾ, ನವೆಂಬರ್.09: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲ ದೃಷ್ಟಿ ನೆಟ್ಟಿದೆ. ನವೆಂಬರ್.10ರಂದು 243 ಕ್ಷೇತ್ರಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ. ಚುನಾವಣಾ ಫಲಿತಾಂಶ ಹೊರ ಬೀಳುವುದಕ್ಕೂ ಮೊದಲೇ ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಬಿಹಾರದ ಪಾಟ್ನಾ ಸಾಹೇಬ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೂ ಮೊದಲೇ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗೆಲುವಿನ ಸಂಭ್ರಮ ಆಚರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನವೆಂಬರ್.10ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಿಹಿಲಾಡು ಸಿದ್ಧಪಡಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ನಂದಕಿಶೋರ್ ಯಾದವ್ ಗೆಲ್ಲುವುದು ನಿಶ್ಚಿತ ಂದ ಲೆಕ್ಕದಲ್ಲಿ ಬಿಜೆಪಿ ಸಂಭ್ರಮಾಚರಿಸಲು ಸಿದ್ಧವಾಗುತ್ತಿದೆ.

Bihar Election Result: BJP Workers In Patna Sahib Constituency Are Preparing Sweets For Celebration

ಪಾಟ್ನಾ ಸಾಹೇಬ್ ವಿಧಾನಸಭಾ ಕ್ಷೇತ್ರ:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಾಟ್ನಾ ಸಾಹೇಬ್ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಬಿಜೆಪಿ ಅಭ್ಯರ್ಥಿ ನಂದ ಕಿಶೋರ್ ಯಾದವ್ ಸತತ ಆರು ಬಾರಿ ಪಾಟ್ನಾ ಸಾಹೇಬ್ ಕ್ಷೇತ್ರದಿಂದಲೇ ದಿಗ್ವಿಜಯ ಸಾಧಿಸಿದ್ದು, ಈ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಹಾಗೂ ನಟ ಶತ್ರುಜ್ಞ ಸಿನ್ಹಾ ಪುತ್ರ ಲವ ಸಿನ್ಹಾರನ್ನು ಇಲ್ಲಿ ಕಣಕ್ಕಿಳಿಸಿದೆ. ಮತದಾರರ ಒಲವು ಯಾರ ಪರವಿದೆ ಎನ್ನುವುದು ಮಂಗಳವಾರ ಗೊತ್ತಾಗಲಿದೆ.

2020ರ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದ್ದು, ನವೆಂಬರ್.10ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+