ಪೊಲೀಸ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಆಟೊ ಡ್ರೈವರ್: ವೈರಲ್ ವಿಡಿಯೋ

ಪಟ್ನಾ, ಮಾರ್ಚ್ 27: ತಪ್ಪು ಮಾರ್ಗದಲ್ಲಿ ಬಂದದ್ದಕ್ಕೆ ಆಟೋವನ್ನು ತಡೆದ ಪೊಲೀಸ್‌ಗೆ ಆಟೋ ಚಾಲಕ ಮತ್ತು ಇತರರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಿಹಾರದ ಮುಜಫ್ಫರ್‌ಪುರ್ ಜಿಲ್ಲೆಯ ಬಜಾರ್ ಚೌಕ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಚಾಲಕ ಮತ್ತು ಆತನ ಜತೆಗಾರರು ಪೊಲೀಸ್ ಸಿಬ್ಬಂದಿಯನ್ನು ರಸ್ತೆಯಲ್ಲಿ ತಳ್ಳಾಡಿಕೊಂಡು ಹೊಡೆದಿದ್ದಾರೆ. ಮುಖ, ಹೊಟ್ಟೆಗೆ ಮನಬಂದಂತೆ ಗುದ್ದಿದ್ದಾರೆ. ಪೆಟ್ಟು ತಾಳಲಾರದೆ ನೆಲಕ್ಕ ಬಿದ್ದ ಬಳಿಕವೂ ಕಾಲಿನಿಂದ ತುಳಿದಿದ್ದಾರೆ.

ರಾಂಗ್‌ ಸೈಡ್‌ನಲ್ಲಿ ಬಂದ ಆಟೋವನ್ನು ತಡೆದ ಪೊಲೀಸ್, ಚಾಲಕನನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

Auto driver thrash police personnel muzaffarpur bazar chowk biha

ಸಾರ್ವಜನಿಕರು ಮತ್ತು ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ದುಷ್ಕರ್ಮಿಗಳನ್ನು ತಡೆದಿದ್ದಾರೆ.

ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+