ಗೋವಾ ರಾಜಕೀಯದಲ್ಲಿ ಮತ್ತೆ ನಾಟಕೀಯ ತಿರುವು!

ಪಣಜಿ, ಮಾರ್ಚ್ 28: ಗೋವಾ ರಾಜಕೀಯ ದಿನೇ ದಿನೇ ನಾಟಕೀಯ ತಿರುವು ಪಡೆಯುತ್ತಿದ್ದು, ಇಂದು ನಡೆದ ಬೆಳವಣಿಗೆಯಲ್ಲಿ ಹೊಸ ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳವಾರ ತಡರಾತ್ರಿ ಬಿಜೆಪಿ ಸೇರಿದ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ನಾಯಕ, ಗೋವಾ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಮನೋಹರ್ ಅಜಗಾಂವ್ಕರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿದೆ.

ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಆಗಿನ ಸ್ಪೀಕರ್ ಆಗಿದ್ದ ಡಾ. ಪ್ರಮೋದ್ ಸಾವಂತ್ ಅವರನ್ನು ಗೋವಾ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ರಾತ್ರೋರಾತ್ರಿ ನೇಮಿಸಿತ್ತು. ತಡರಾತ್ರಿಯೇ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.

Manohar Ajgaonkar is appointed as DCM of Goa

ಅದೇ ದಿನ ಎಂಜಿಪಿಯ ಸುದಿನ್ ಧವಾಲಿಕರ್ ಮತ್ತು ಗೋವಾ ಫಾರ್ವರ್ಡ್ ಪಕ್ಷದ ವಿಜಯ್ ಸರ್ದೇಸಾಯಿ ಇಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು. ಮೈತ್ರಿ ಪಕ್ಷಗಳು ಬಂಡಾಯ ಎದ್ದರೆ ಸರ್ಕಾರ ಬೀಳುವ ಭಯವಿದ್ದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಆದರೆ ಅದಾಗಿ ಒಂದೇ ದಿನದಲ್ಲಿ ಎಂಜಿಪಿಯ ಮೂವರು ಸದಸ್ಯರಲ್ಲಿ ಇಬ್ಬರು(ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್) ಬಿಜೆಪಿ ಸೇರಿ, ಎಂಜಿಪಿಯನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಆ ನಂತರ ಸುಧಿನ್ ಧವಾಲಿಕರ್ ಅವರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಉಪಮುಖ್ಯಮಂತ್ರಿ ಹುದ್ದೆಯಿಂದ ಕೈಬಿಟ್ಟಿದ್ದರು.

ಈ ಎಲ್ಲ ಬೆಳವಣಿಗೆಯ ನಂತರ ಇಂದು, ಮನೋಹರ್ ಅಜಗಾಂವ್ಕರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+