ಗೋವಾದಲ್ಲಿ ನವೆಂಬರ್ 1 ರಿಂದ ಕ್ಯಾಸಿನೊಗಳು ಪುನರಾರಂಭ
ಪಣಜಿ, ಅಕ್ಟೋಬರ್ 28: ಗೋವಾದಲ್ಲಿ ನವೆಂಬರ್ 1ರಿಂದ ಕ್ಯಾಸಿನೋಗಳು ಪುನರಾರಂಭಗೊಳ್ಳಲಿದೆ.
ಗೋವಾ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಕೊವಿಡ್ ಮಾರ್ಗಸೂಚಿಯಲ್ಲಿ ನವೆಂಬರ್ 1 ರಿಂದ ಕ್ಯಾಸಿನೊಗಳನ್ನು ತೆರೆಯಲು ಅನುಮತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋವಾ ಸರ್ಕಾರವು ಅನ್‌ಲಾಕ್ ಪ್ರಕ್ರಿಯೆಯಡಿ ಹಲವು ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು, ರಾಜ್ಯದ ಆರ್ಥಿಕತೆಯನ್ನು ಮತ್ತೆ ಸರಿ ದಾರಿಗೆ ತರಲು ಪ್ರಯತ್ನಿಸುತ್ತಿದೆ.

ಪ್ರವಾಸೋದ್ಯಮವೇ ಗೋವಾ ರಾಜ್ಯಕ್ಕೆ ಪ್ರಮುಖ ಆದಾಯವಾಗಿದೆ. ಮತ್ತೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳನ್ನು ಸರ್ಕಾರ ಹಂತ ಹಂತವಾಗಿ ಮಾಡುತ್ತಿದೆ. ಕೊವಿಡ್ 19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮಾರ್ಚ್ ತಿಂಗಳಿನಿಂದ ಈ ಕ್ಯಾಸಿನೊಗಳನ್ನು ಮುಚ್ಚಲಾಗಿತ್ತು. ಕೊವಿಡ್ 19 ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
Recommended Video
ಕ್ಯಾಸಿನೊಗಳಲ್ಲಿ ಸಾಮರ್ಥ್ಯಕ್ಕಿಂತ ಶೇ.50ರಷ್ಟು ಜನರು ಮಾತ್ರ ಇರಬೇಕು. ಅಲ್ಲದೆ ರಾಜ್ಯ ಗೃಹ ಇಲಾಖೆ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಕ್ಯಾಸಿನೊಗಳು ಮತ್ತೆ ತೆರೆಯುವುದಕ್ಕೂ ಮುನ್ನ ಸರ್ಕಾರಕ್ಕೆ ಪರವಾನಗಿ ಶುಲ್ಕ ಪಾವತಿಸಬೇಕು ಎಂದು ಮಾಹಿತಿ ನೀಡಿದರು.












Click it and Unblock the Notifications