ರಾಹುಲ್ ಗಾಂಧಿಯನ್ನು ಬಾಯ್ತುಂಬ ಹೊಗಳಿದ ಗೋವಾ ಬಿಜೆಪಿ ಮುಖಂಡ

ಪಣಜಿ, ಜನವರಿ 30: "ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಸರಳ ವ್ಯಕ್ತಿ. ಅವರು ಭಾರತಕ್ಕಷ್ಟೇ ಅಲ್ಲ, ವಿಶ್ವದ ನಾಯಕರು, ಅಂಥವರ ನಾಯಕತ್ವ ದೇಶಕ್ಕೆ ಅಗತ್ಯವಿದೆ" ಎಂದು ಗೋವಾ ವಿಧಾನಸಭೆಯ ಉಪ ಸಭಾಪತಿ, ಬಿಜೆಪಿ ಶಾಸಕ ಮೈಕೆಲ್ ಲೋಬೋ ಹೇಳಿರುವುದು ಬಿಜೆಪಿಗರ ಹುಬ್ಬೇರಿಸಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಯೋಗಕ್ಷೇಮ ವಿಚಾರಿಸಲು ಬಂದಿದ್ದ ರಾಹುಲ್ ಅವರ ನಡೆಯನ್ನು ಲೋಬೋ ಶ್ಲಾಘಿಸಿದರು.

"ರಾಹುಲ್ ಜೀ ಅವರು ಗೋವಾಕ್ಕೆ ಬಂದು ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹೋದರು. ಅವರ ಸರಳತೆ ಮತ್ತು ವಿನಯ ನಮಗೆ ತೃಪ್ತಿ ನೀಡಿತು. ಇಂಥ ಸರಳ ವ್ಯಕ್ತಿಗಳೇ ಗೋವಾ ರಾಜ್ಯ ಮತ್ತು ಭಾರತಕ್ಕೂ ಅಗತ್ಯವಿದೆ" ಎಂದು ಲೋಬೋ ಹೇಳಿದರು.

Goa Deputy Speaker and BJP MLA Michael Lobo praises Rahul Gandhi

ಗೋವಾ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಂಗಳವಾರ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾಗಿದ್ದರು. ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಅವರ ಕಚೇರಿ ಎದುರು ರಾಹುಲ್ ಗಾಂಧಿ ಅವರು ನಡೆದು ಹೋಗುತ್ತಿರುವ ಚಿತ್ರ ಮಾಧ್ಯಮಕ್ಕೆ ಲಭ್ಯವಾಗಿದ್ದು, ಉಭಯ ನಾಯಕರ ಭೇಟಿ ಅಚ್ಚರಿ ಮೂಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+