ಗೋವಾ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ: ಚಂದ್ರಕಾಂತ್ ಉಪ ಮುಖ್ಯಮಂತ್ರಿ

ಪಣಜಿ, ಜುಲೈ 13: ಗೋವಾ ಸರ್ಕಾರದ ಸಂಪುಟ ವಿಸ್ತರಣೆ ಶನಿವಾರ ನಡೆದಿದ್ದು ಕಾಂಗ್ರೆಸ್‌ನ ಮೂರು ಅತೃಪ್ತ ಶಾಸಕರು ಸೇರಿ ಒಟ್ಟು ನಾಲ್ವರು ಸಂಪುಟ ಸೇರಿದ್ದಾರೆ.
ಚಂದ್ರಕಾಂತ್ ಕವಲೇಕರ್ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.

ಉಪ ಸ್ಪೀಕರ್ ಮೈಕೆಲ್ ಲೋಬೋ ಸೇರಿ ನಾಲ್ಕು ಮಂದಿ ಸಂಪುಟ ಸೇರ್ಪಡೆಯಾಗಿದ್ದಾರೆ.ಗುರುವಾರ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈಗ ವಿಶ್ವಾಸಮತವನ್ನು ಸಾಬೀತು ಮಾಡಿರುವ ಬಿಜೆಪಿಯ ಒಟ್ಟು ಸದಸ್ಯರ ಸಂಖ್ಯೆ ಈಗ 27ಕ್ಕೆ ಏರಿಕೆಯಾಗಿದೆ.

ಗೋವಾ ಮುಖ್ಯಮಂತ್ರಿ ಗೋವಾ ಫಾರ್ವರ್ಡ್ ಪಕ್ಷದಿಂದ ಮೂವರನ್ನು ಕೆಳಗಿಳಿಸಿ ಅವರ ಜಾಗಕ್ಕೆ ಜೆನಿಫರ್ ಮಾನ್ಸರೇಟ್ ಹಾಗೂ ಫಿಲಿಪ್ ನೆರಿಯನ್ನು ಸೇರ್ಪಡೆಗೊಳಿಸಲಾಗಿದೆ.

Goa Cabinet rishuffle Gets Four New Ministers

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಪ್ರತಿಜ್ಞಾ ವಿಧಿ ಬೋಧಿಸಿದರು.ಹೊಸ ಸಚಿವರನ್ನು ಬರಮಾಡಿಕೊಳ್ಳಲು ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ , ನೀರಾವರಿ ಸಚಿವ ವಿನೋದ್ ಪಾಳೇಕರ್, ಗ್ರಾಮೀಣಾಭಿವೃದ್ಧಿ ಸಚಿವ ಜಯೇಶ್ ಹಾಗೂ ಕಂದಾಯ ಸಚಿವ ರೋಹನ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+