ಮಿಗ್ ವಿಮಾನದಲ್ಲಿ ಬೆಂಕಿ, ಕೆಲವು ಗಂಟೆ ಗೋವಾ ಏರ್‌ಪೋರ್ಟ್ ಬಂದ್
ಪಣಜಿ, ಜೂನ್ 8: ಮಿಗ್ 29ಕೆ ವಿಮಾನ ಟೇಕ್ ಆಫ್ ಆಗುವಾಗ ಡ್ರಾಪ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ತಾಸುಗಳ ಕಾಲ ಗೋವಾ ಏರ್‌ಪೋರ್ಟ್ ಬಂದ್ ಮಾಡಲಾಗಿದೆ.
Spokesperson Navy: Goa Airport closed temporarily for a few hours in view of fire caused by a drop tank of MiG 29K which got detached whilst taking off. All efforts in hand to resume flights as soon as possible. MiG 29K fighter aircraft is safe. (Pic courtesy: Spokesperson Navy) pic.twitter.com/dpPbMhBodV
— ANI (@ANI) June 8, 2019
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪುನಃ ಏರ್‌ಪೋರ್ಟ್ ತೆರೆಯಲಾಗುವುದು ಎಂದು ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ, ಅಷ್ಟೇ ಅಲ್ಲದೆ ಮಿಗ್ 29ಕೆ ಏರ್‌ಕ್ರಾಫ್ಟ್ ಸುರಕ್ಷಿತವಾಗಿದೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗೋವಾ ಏರ್‌ಪೋರ್ಟ್‌ನಲ್ಲಿ ನಾಗರಿಕ ಹಾಗೂ ಸೇನಾ ಏರ್‌ಕ್ರಾಫ್ಟ್ ಎರಡೂ ಬಳಕೆಯಾಗುತ್ತದೆ.












Click it and Unblock the Notifications