2 ಕಟ್ಟಡಗಳ ನಡುವೆ ಸಿಲುಕಿ ನೇತಾಡುತ್ತಿತ್ತು ನಾಪತ್ತೆಯಾಗಿದ್ದವಳ ಶವ
ನೋಯ್ಡಾ, ಜುಲೈ 3: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದವಳ ಶವ ಎರಡು ಕಟ್ಟಡಗಳ ಮಧ್ಯೆ ನೇತಾಡುತ್ತಿರುವುದು ಕಂಡು ಬಂದ ಘಟನೆ ನೋಯ್ಡಾ ದಲ್ಲಿ ನಡೆದಿದೆ.
19 ವರ್ಷ ಮಹಿಳೆಯ ಮೃತದೇಹವು 120 ಅಡಿ ಎತ್ತರದ ಎರಡು ಕಟ್ಟಡಗಳ ನಡುವೆ ಸಿಲುಕಿಕೊಂಡಿತ್ತು, ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಕೇವಲ 1.5 ಅಡಿಯಷ್ಟು ಮಾತ್ರ ಅಂತರವಿದೆ. ಇದನ್ನು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನೋಯ್ಡಾದ ಆಮ್ರಪಾಲಿ ಸಿಲಿಕಾನ್ ಸೊಸೈಟಿಯ ನೊಯ್ಡಾ ಸೆಕ್ಟರ್ 76ರಲ್ಲಿ ನಡೆದಿದೆ.ಎನ್‌ಡಿಆರ್‌ಎಫ್ ತಂಡವು ಶವವನ್ನು ಕೆಳಗಿಳಿಸಲು ಹರಸಾಹಸಪಡುತ್ತಿದೆ. ಮಹಿಳೆಯು ಬಿಹಾರ ಮೂಲದವರಾಗಿದ್ದು ಅದೇ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಜೂನ್ 28ರಿಂದ ಆಕೆ ಕಾಣೆಯಾಗಿದ್ದಳು.

ಇಂದು ಹರ್ಯಾಣದಿಂದ ದಂಪತಿ ಬಂದ ಬಳಿಕ ಅವರಿಗೆ ಈ ವಿಷಯ ಕೇಳಿ ಶಾಕ್ ಆಗಿದೆ. ಅವರು ಗುರುತಿಸಿದ ಬಳಿಕವೇ ಅವಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಗಿನ ಜಾವದಿಂದಲೇ 35 ಮಂದಿಯ ಎನ್‌ಆರ್‌ಎಫ್ ತಂಡ ಕೆಲಸ ಮಾಡುತ್ತಿದೆ. ಸ್ವಲ್ಪ ಗೋಡೆಯನ್ನು ಕೊರೆದು ಶವವನ್ನು ಹೊರತೆಗೆಯಲಾಗಿದೆ.












Click it and Unblock the Notifications