ಅಮಿತ್ ಶಾ ಬೆಂಬಲಿಸಿ ಮುಫ್ತಿ ವಿರುದ್ಧ ಗಂಭೀರ್ ಟ್ವೀಟ್ ದಾಳಿ

ನವದೆಹಲಿ, ಜೂನ್ 04: ಮಾಜಿ ಕ್ರಿಕೆಟರ್, ನೂತನ ಸಂಸದ ಗೌತಮ್ ಗಂಭೀರ್ ಅವರು ಮತ್ತೊಮ್ಮೆ ಟ್ವೀಟ್ ಗಳಿಂದ ಸುದ್ದಿಯಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ವಿರುದ್ಧ ಗಂಭೀರ್ ಟ್ವೀಟ್ ದಾಳಿ ಮಾಡಿದ್ದಾರೆ.

ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕುರಿತಂತೆ ಅಮಿತ್ ಶಾ ನಿಲುವೇನು? ಏನು ಪರಿಹಾರ ಸಿಗಬಹುದು ಎಂದು ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದರು. ಇದಕ್ಕೆ ಗಂಭೀರ್ ಉತ್ತರ ನೀಡಿ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಕುರಿತಂತೆ ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ದೇಶದ ಭದ್ರತೆ ವಿಷಯಕ್ಕೆ ಬಂದರೆ, ಯಾವ ಹಂತದ ಕಠಿಣ ನಿರ್ಧಾರವಾದರೂ ಸರಿ, ಇತಿಹಾಸವು ತಾಳ್ಮೆಯನ್ನು ಕಂಡಿದೆ, ಅಗತ್ಯ ಬಿದ್ದಾಗ ಪರಾಕ್ರಮವನ್ನು ಕಾಣಲಿದೆ ಎಂದಿದ್ದಾರೆ.

ಕಾಶ್ಮೀರ ಸಮಸ್ಯೆ ಬಗ್ಗೆ ಅಮಿತ್ ಶಾ ಗೆ ಸರಿಯಾದ ಜ್ಞಾನವಿಲ್ಲ, ಅವರ ದಬ್ಬಾಳಿಕೆ, ಕ್ರೂರತನ ಕಾಣಬೇಕಾಗುತ್ತದೆಯೇನೋ, 1947ರಿಂದ ಕಾಶ್ಮೀರವನ್ನು ಯಶಸ್ವಿ ಸರ್ಕಾರಗಳ ದೃಷ್ಟಿಕೋನದಿಂದ ನೋಡಲಾಗಿದೆ. ಪಾಲುದಾರರನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಸಮಸ್ಯೆ ಬಗೆಹರಿಸಬೇಕು. ಅದರ ಬದಲು ತ್ವರಿತ ಫಲಿತಾಂಶಕ್ಕಾಗಿ ಬಲವಂತವಾಗಿ ದಾಳಿ ನಡೆಸುವುದು ಸರಿಯಲ್ಲ ಎಂದು ಮುಫ್ತಿ ಅವರು ಟ್ವೀಟ್ ಮಾಡಿದ್ದರು.

ಮೆಹಬೂಬಾ ಮುಫ್ತಿ ಟ್ವೀಟ್

1947ರಿಂದ ಕಾಶ್ಮೀರವನ್ನು ಯಶಸ್ವಿ ಸರ್ಕಾರಗಳ ದೃಷ್ಟಿಕೋನದಿಂದ ನೋಡಲಾಗಿದೆ. ಪಾಲುದಾರರನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಸಮಸ್ಯೆ ಬಗೆಹರಿಸಬೇಕು. ಅದರ ಬದಲು ತ್ವರಿತ ಫಲಿತಾಂಶಕ್ಕಾಗಿ ಬಲವಂತವಾಗಿ ದಾಳಿ ನಡೆಸುವುದು ಸರಿಯಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಬೆಂಬಲಿಸಿ ಗಂಭೀರ್ ಟ್ವೀಟ್

ದೇಶದ ಭದ್ರತೆ ವಿಷಯಕ್ಕೆ ಬಂದರೆ, ಯಾವ ಹಂತದ ಕಠಿಣ ನಿರ್ಧಾರವಾದರೂ ಸರಿ, ಇತಿಹಾಸವು ತಾಳ್ಮೆಯನ್ನು ಕಂಡಿದೆ, ಅಗತ್ಯ ಬಿದ್ದಾಗ ಪರಾಕ್ರಮವನ್ನು ಕಾಣಲಿದೆ ಎಂದು ಮಾಜಿ ಕ್ರಿಕೆಟರ್, ದೆಹಲಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

ಹೊಸ ಸಂಸದ ಗಂಭೀರ್ ಜೋಕರ್

ಹೊಸ ಸಂಸದ ಗಂಭೀರ್ ಜೋಕರ್ ಎಂದ ಟ್ವೀಟ್, ಹಿಂಸೆ, ದಬ್ಬಾಳಿಕೆಯಿಂದ ಎಲ್ಲವನ್ನು ಸರಿಪಡಿಸಬಹುದಾದರೆ ಶಾಂತಿ ಎಲ್ಲಿದೆ ಸ್ಥಾನ, ನಿಮ್ಮ ಮನೆಗೂ ದಾಳಿ ಇಡಬಹುದು ಆಗ ಉಳಿಸಲು ಯಾರು ಇರುವುದಿಲ್ಲ

ಧರ್ಮದ ಸಮಸ್ಯೆ ಇರುವುದು

ಕಣಿವೆ ರಾಜ್ಯದಲ್ಲಿ ಇರುವುದು ರಾಜಕೀಯ ಸಮಸ್ಯೆಯಲ್ಲ, ಧರ್ಮದ ಸಮಸ್ಯೆ, ಕಾಶ್ಮೀರಿ ಪಂಡಿತರನ್ನು ಹೊರ ಹಾಕಿರುವುದೇ ಇದಕ್ಕೆ ಉದಾಹರಣೆ, ಪಾಕಿಸ್ತಾನದಿಂದ ಬರುವ ಸಲಹೆಯನ್ನು ನಮ್ಮ ಮೇಲೆ ಹೇರಬೇಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+