ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳವಿಲ್ಲದ ಜೆಟ್‌ ಏರ್‌ವೇಸ್‌ನ ಸಾವಿರಾರು ನೌಕರರ ಪಾಡು ಏನಾಗಿದೆ ಗೊತ್ತೇ?

|
Google Oneindia Kannada News

ನವದೆಹಲಿ, ಏ.16: ಆರ್ಥಿಕ ನಷ್ಟದಿಂದ ಜೆಟ್‌ ಏರ್‌ವೇಸ್ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಳ್ಳುವತ್ತ ಸಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುಮಾರು 16 ಸಾವಿರಕ್ಕೂ ಹೆಚ್ಚು ನೌಕರರ ಭವಿಷ್ಯ ಅತಂತ್ರವಾಗಿದೆ. ಈ ನೌಕರರ ಗೋಳು ಹೇಳತೀರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಸಿಬ್ಬಂದಿಗೆ ಇಎಂಐ ಚಿಂತೆಯಾದರೆ ಇನ್ನೂ ಕೆಲವರಿಗೆ ಮಕ್ಕಳ ಭವಿಷ್ಯದ ಚಿಂತೆ ಕಾಡಿದೆ ಮಕ್ಕಳ ಶಾಲಾ ಶುಲ್ಕವನ್ನು ಭರಿಸುವುದು ಕಷ್ಟವಾಗಿದೆ.

13 ಅಂತಾರಾಷ್ಟ್ರೀಯ ಮಾರ್ಗಗಳ ಹಾರಾಟ ರದ್ದು ಪಡಿಸಿದ ಜೆಟ್ ಏರ್‌ವೇಸ್ 13 ಅಂತಾರಾಷ್ಟ್ರೀಯ ಮಾರ್ಗಗಳ ಹಾರಾಟ ರದ್ದು ಪಡಿಸಿದ ಜೆಟ್ ಏರ್‌ವೇಸ್

ಒಬ್ಬ ಎಂಜಿನಿಯರ್ ಮಗನ ಚಿಕಿತ್ಸೆಗೆ ಹಣವನ್ನು ಹೊಂದಿಸಲಾಗದೆ ಆತ ಮೃತಪಟ್ಟಿರುವ ಘಟನೆ ನಡೆದಿದೆ. 16 ಸಾವಿರ ಸಿಬ್ಬಂದಿಯ ಬಳಿಯೂ ಇಂತಹ ಸಾವಿರಾರು ಮನಕಲಕುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿದೆ.

Tottering Airline Pulling Down Thousands With It

ಕೇಂದ್ರ ಸರ್ಕಾರ ಅಥವಾ ಬೇರೆ ಜೆಟ್‌ಏರ್ ವೇಸ್ ಆಡಳಿತ ವ್ಯವಸ್ಥೆ ಕೂಡಲೇ ವ್ಯವಸ್ಥೆ ಮಾಡದಿದ್ದರೆ ಜೆಟ್ ಏರ್‌ವೇಸ್ ನ ಸಾವಿರಾರು ನೌಕರರು ಕುಟುಂಬ ಸಮೇತ ಬೀದಿಗೆ ಬೀಳಲಿದ್ದಾರೆ.

ಎಂಜಿನಿಯರ್ ಒಬ್ಬರು ಕ್ಯಾಪ್ಟನ್‌ಗೆ ಕರೆ ಮಾಡಿ ತನ್ನ ಮಗನಿಗೆ ಬ್ಲಡ್ ಕ್ಯಾನ್ಸರ್ ಇದೆ. ಚಿಕಿತ್ಸೆಗೆ 25 ಲಕ್ಷ ರೂ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ದಯವಿಟ್ಟು ಎಚ್‌ಆರ್‌ಗೆ ತಿಳಿಸಿ ಬಾಕಿ ಇರುವ ಮೂರು ತಿಂಗಳ ಸಂಬಳವನ್ನು ಹೇಗಾದರೂ ಮಾಡಿ ಕೊಡಿಸಿ ಎಂದು ಅಂಗಲಾಚಿದ್ದರು. ಅಪ್ಲಾಸ್ಟಿಕ್ ಅನೇಮಿಯಾ ಬಂದರೆ ಹೊಸ ರಕ್ತಗಳ ಉತ್ಪಾದನೆಯನ್ನು ಅದು ಅಲ್ಲಿಯೇ ತಡೆಹಿಡಿಯುತ್ತದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕ್ಯಾಪ್ಟನ್ ದಿಕ್ಕೇ ತೋಚದೆ ತನ್ನ ಸಹೋದ್ಯೋಗಿಗಳಲ್ಲಿ ಮನವಿ ಮಾಡಿ ಸ್ವಲ್ಪ ಧನ ಸಹಾಯ ಮಾಡುವಂತೆ ಕೇಳಿಕೊಂಡರು. ಆದರೆ ಅಷ್ಟರಲ್ಲಾಗಲೇ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದೇ ರೀತಿ ಸಾವಿರಾರು ಘಟನೆಗಳು ನಮ್ಮ ಕಣ್ಣಮುಂದೆ ಬರುತ್ತದೆ.

English summary
March 16, 2019, is a day Jet Airways’ Captain Amit Rai (name changed) isn’t going to forget. That morning, he received a message posted by an aircraft maintenance engineer (AME) on a WhatsApp group seeking financial help for his son who was being treated for aplastic anemia, a condition in which the human body stops producing enough new blood cells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X