ಸಿಜೆಐ ವಿರುದ್ಧದ ಪ್ರಕರಣ: ಮಹಿಳೆಗೆ ನೋಟಿಸ್, ಏ. 26ಕ್ಕೆ ವಿಚಾರಣೆ

ನವದೆಹಲಿ, ಏಪ್ರಿಲ್ 24: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆಗೆ ನಿಯೋಜಿಸಲಾಗಿರುವ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಸಮಿತಿಯು, ಆರೋಪ ಮಾಡಿರುವ ಮಹಿಳೆಗೆ ನೋಟಿಸ್ ನೀಡಿದೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ನ್ಯಾಯಮೂರ್ತಿಗಳಾದ ರಮಣ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡಿರುವ ಸಮಿತಿ, ಏಪ್ರಿಲ್ 26ರಂದು ವಿಚಾರಣೆಗೆ ಹಾಜರಾಗುವಂತೆ, ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೂ ಆಗಿರುವ ಮಹಿಳೆಗೆ ಸೂಚಿಸಿದೆ.

ಈ ಪ್ರಕರಣದ ಮೊದಲ ವಿಚಾರಣೆಯು ಶುಕ್ರವಾರ ನಡೆಯಲಿದ್ದು, ಎಲ್ಲ ದಾಖಲೆಗಳು ಮತ್ತು ವಸ್ತುಗಳೊಂದಿಗೆ ಸಿದ್ಧರಿರುವಂತೆ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಲಾಗಿದೆ.

Supreme Court panel issued notice woman accused against CJI Ranjan Gogoi hearing april 26

ಈ ವಿಚಾರಣೆಯು ಸುಪ್ರೀಂಕೋರ್ಟ್‌ನಲ್ಲಿ ಆಂತರಿಕವಾಗಿ ನಡೆಯಲಿದ್ದು, ಇಬ್ಬರೂ ಕಕ್ಷಿದಾರರ ಪರ ವಕೀಲರು ವಾದ ಮಂಡಿಸುವುದಿಲ್ಲ. ಇದು ಔಪಚಾರಿಕ ನ್ಯಾಯಾಂಗ ಪ್ರಕ್ರಿಯೆಯಾಗಿರಲಿದೆ. ವಿಚಾರಣೆಯನ್ನು ಪೂರ್ಣಗೊಳಿಸಲು ಯಾವುದೇ ಕಾಲಮಿತಿಯ ಗಡುವು ಹಾಕಿಲ್ಲ. ವಿಚಾರಣೆಯಿಂದ ಹೊರ ಬೀಳುವ ವಿಚಾರದ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದು ಅತ್ಯಂತ ಗೋಪ್ಯವಾಗಿರುತ್ತದೆ ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದರು.

ಸ್ವತಃ ತಮ್ಮ ವಿರುದ್ಧದ ಆರೋಪ ಪ್ರಕರಣದ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರೇ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರ ವಿರುದ್ಧ ಹಿರಿಯ ವಕೀಲರು ಮತ್ತು ನ್ಯಾಯವಾದಿ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಟೀಕೆ ವ್ಯಕ್ತವಾದ ಬಳಿಕ ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು.

ಈ ನಡುವೆ, ಸಿಜೆಐ ಅವರನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ವ್ಯಕ್ತಿಯೊಬ್ಬರು ಆಮಿಷ ಒಡ್ಡಲು ಬಂದಿದ್ದಾಗಿ ಹೇಳಿಕೆ ನೀಡಿದ್ದ ವಕೀಲ ಉತ್ಸವ್ ಬೈನ್ಸ್ ಅವರಿಗೆ ಗುರುವಾರ ಬೆಳಿಗ್ಗೆ 10.30ರ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+