ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ
ನವದೆಹಲಿ, ಆಗಸ್ಟ್ 13: ಕೇಂದ್ರ ಸಚಿವ ನಿತಿನ್ ಗಡ್ಕರಿ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಾರಾಟ ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳವಾರ(ಆಗಸ್ಟ್ 13)ರಂದು ಬೆಳಗ್ಗೆ ನಿತಿನ ಗಡ್ಕರಿ ಇಂಡಿಗೋ ವಿಮಾನದಲ್ಲಿ ನಾಗ್ಪುರದಿಂದ ದೆಹಲಿಗೆ ಇಂಡಿಗೋ ವಿಮಾನ ಹೊರಟಿತ್ತು.
ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಡಿಬೋರ್ಡ್ ಮಾಡಲಾಗಿದೆ. ಇಂಡಿಗೊ ಫ್ಲೈಟ್ 6 ಇ 636 ರ ಪೈಲಟ್ ದೋಷವನ್ನು ಗಮನಿಸಿದ ನಂತರ ಟೇಕ್-ಆಫ್ ಸ್ಥಗಿತಗೊಳಿಸಲು ನಿರ್ಧರಿಸಿದರು.

ಇನ್ನೇನು ಟೇಕ್ ಆಫ್ ಗೆ ಕೆಲವೇ ಸೆಕೆಂಡ್‌ಗಳಿದ್ದಾಗ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿ ಪೈಲಟ್ ಸಮಯಪ್ರಜ್ಞೆ ಮೆರೆದರು. ಪೈಲಟ್ ಟೇಆಫ್‌ನ್ನು ಸ್ಥಗಿತಗೊಳಿಸಿದ ಬಳಿಕ ವಿಮಾನ ರನ್‌ವೇನಿಂದ ಟ್ಯಾಕ್ಸಿವೇಗೆ ವಾಪಸಾಯಿತು ಎಎನ್ಐ ವರದಿ ಮಾಡಿದೆ.












Click it and Unblock the Notifications