ದರೋಡೆ ಮಾಡಿದ ಮೇಲೆನೇ ಗೊತ್ತಾಗಿದ್ದು, ಆಕೆ ಪ್ರಧಾನಿ ಮೋದಿ ಅಣ್ಣನ ಮಗಳೆಂದು

ನವದೆಹಲಿ, ಅ 15: ಪ್ರಧಾನಿ ಮೋದಿಯ ಅಣ್ಣನ ಮಗಳು ದಮಯಂತಿ ಬೆನ್ ಮೋದಿಯ ಹಣ ಮತ್ತು ಮೊಬೈಲ್ ಎಗರಿಸಿದ್ದ ಇಬ್ಬರು ಕಿರಾತಕರಲ್ಲಿ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Recommended Video

      ರಾಹುಲ್, ಸೋನಿಯಾ ಬಗ್ಗೆ ವಿಶೇಷ ಕಾಳಜಿ ತೋರಿದ ಮೋದಿ. | Narendra Modi

      ಕಳೆದ ಶನಿವಾರ (ಅ 12) ಬೆಳಗ್ಗೆ ಅಮೃತಸರದಿಂದ ದೆಹಲಿಗೆ ವಾಪಸ್ ಆಗಿ, ಮನೆಗೆ ಹೋಗುತ್ತಿದ್ದಾಗ, ಬೈಕ್ ನಲ್ಲಿ ಬಂದ ಇಬ್ಬರು ದಮಯಂತಿಯ ಪರ್ಸ್, ಮೊಬೈಲ್ ಮತ್ತು ದಾಖಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಉತ್ತರ ದೆಹಲಿಯ ಗುಜರಾತಿ ಸಮಾಜ ಭವನದ ಬಳಿ ಈ ಘಟನೆ ನಡೆದಿತ್ತು.

      ಪರ್ಸ್ ನಲ್ಲಿ 56ಸಾವಿರ ನಗದು, ಎರಡು ಫೋನ್ ಗಳಿದ್ದವು. ಇದರ ಜೊತೆಗೆ ಕೈಗಡಿಯಾರ, ಕೆಲವು ದಾಖಲೆಗಳನ್ನೂ ದೋಚಿದ್ದರು. ಬೈಕ್ ನಲ್ಲಿ ಬಂದ ಇಬ್ಬರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಆದ ನಂತರವಷ್ಟೇ ಆತನಿಗೆ ತಾವು ದರೋಡೆ ಮಾಡಿದ್ದು, ಪ್ರಧಾನಿ ಮೋದಿ ಕಡೆಯವರನ್ನು ಎಂದು.

      Robbers Got To Know, They Robbed Prime Minister Modi Brother Daughter In Delhi

      ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿಯ ಮಗಳಾದ ದಮಯಂತಿ ದೂರು ನೀಡಿದ ನಂತರ ಕಾರ್ಯೋನ್ಮುಖರಾದ ಸುಲ್ತಾನಪುರಿ ಪೊಲೀಸರು, ಘಟನೆ ನಡೆದ ಒಂದೇ ದಿನದಲ್ಲಿ ಇಬ್ಬರಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಈ ಹೈಪ್ರೊಫೈಲ್ ಕೇಸ್ ಬಗೆಹರಿಸಲು ಏಳು ನೂರು ಪೊಲೀಸರನ್ನು ಬಳಸಿಕೊಳ್ಳಲಾಗಿತ್ತು. ಮತ್ತು, ಇನ್ನೂರು ಸಿಸಿಟಿವಿ ಕ್ಯಾಮರಾದ ಫುಟೇಜ್ ಅನ್ನು ಪೊಲೀಸರು ಜಾಲಾಡಿಸಿದ್ದರು. ಇಬ್ಬರು ಆರೋಪಿಗಳಲ್ಲಿ ಒಬ್ಬರ ಪತ್ನಿ, ಆತನಿಗೆ ಕರೆ ಮಾಡಿದ ನಂತರವಷ್ಟೇ ಅವರಿಗೆ ತಿಳಿದದ್ದು, ತಾವು ದೋಚಿದ್ದು ಅಂತಿಥವರನಲ್ಲ ಎಂದು.

      ಬೃಹತ್ ಸಂಖ್ಯೆಯಲ್ಲಿ ಪೊಲೀಸರು ನಮ್ಮ ಮನೆಯನ್ನು ಸುತ್ತುವರಿದಾಗಲೇ, ವಿಷಯದ ಗಂಭೀರತೆಯ ಅರಿವು ನನಗಾಗಿದ್ದು ಎಂದು ಪೊಲೀಸ್ ವಿಚಾರಣೆಯ ವೇಳೆ, ಈತ ತಪ್ಪೊಪ್ಪಿಕೊಂಡಿದ್ದಾನೆ.

      ಪೊಲೀಸ್ ಮೂಲಗಳ ಪ್ರಕಾರ, ಇಬ್ಬರೂ ಆರೋಪಿಗಳು ಅಪ್ರಾಪ್ತರು ಮತ್ತು ಮದ್ಯವ್ಯಸನಿಗಳು. ತಮ್ಮ ಕುಟುಂಬವನ್ನು ಪೋಷಿಸುವುದಕ್ಕಾಗಿ ಇಂತಹ ಅಪರಾಧಗಳನ್ನು ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+