ಹುಟ್ಟುಹಬ್ಬಕ್ಕೆ ರಾಹುಲ್ ವಿದೇಶಕ್ಕೆ, ಅಭಿಮಾನಿಗಳು ಇಲ್ಲೇ
ನವದೆಹಲಿ, ಜೂನ್ 19- ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. 44 ವರ್ಷದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅವರ ಅಭಿಮಾನಿಗಳು ಉತ್ಸುಕತೆಯಿಂದ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಕೇವಲ 44 ಸ್ಥಾನಗಳನ್ನು ಗಳಿಸಿದ್ದರಿಂದ ನಿರಾಶೆಗೊಂಡಿರುವ ರಾಹುಲ್, ಚುನಾವಣೆ ಓಡಾಟದ ನಂತರ ರಿಲ್ಯಾಕ್ಸ್ ಆಗಲು ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಅವರು ಯಾವ ದೇಶದಲ್ಲಿದ್ದಾರೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿಲ್ಲ.

ಆದಾಗ್ಯೂ ರಾಹುಲ್ ಅಭಿಮಾನಿಗಳು ಸೋನಿಯಾ ನಿವಾಸದೆದುರು 44 ಕೆಜಿ ಕೇಕ್ ಕತ್ತರಿಸಿ, ರಾಹುಲ್ ಜನ್ಮದಿನ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಫ್ಲೆಕ್ಸ್, ಪೋಸ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿಲ್ಲ.












Click it and Unblock the Notifications