Punjab Election Results 2022 : ದೆಹಲಿ ಹೊಸ್ತಿಲು ದಾಟಿದ ಅಮ್ ಆದ್ಮಿ; ಪಂಜಾಬಿನಲ್ಲಿ ಚುಕ್ಕಾಣಿ!

ನವದೆಹಲಿ, ಮಾ.10: ಊಹೆ ಮಾಡಿದಂತೆ ದೆಹಲಿ ಮುಖ್ಯಮಂತ್ರಿ ಸಾರಥ್ಯದಲ್ಲಿ ಅಮ್ ಆದ್ಮಿ ಪಕ್ಷ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಅಧಿಕಾರ ಚುಕ್ಕಾಣಿ ಹಿಡಿಯುವ ಹೊಸ್ತಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಇದೇ ಮೊಟ್ಟ ಮೊದಲ ಬಾರಿಗೆ ದೆಹಲಿ ಹೊಸ್ತಲು ದಾಟಿ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಪಂಜಾಬ್‌ನಲ್ಲಿ ನಿರೀಕ್ಷೆಗೂ ಮೀರಿ ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಸಾಧಿಸಿದೆ. ಈ ಬೆಳವಣಿಗೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಮತ್ತು ನಾಯಕರಲ್ಲಿನ ಸಂತಸ ಮುಗಿಲು ಮುಟ್ಟಿದೆ. ಪಂಚಾಬ್ ನಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದನ್ನು ಆಪ್ ನಿರೂಪಿಸಿದೆ.

ಎಕ್ಸಿಟ್ ಪೋಲ್ ರಿಸಲ್ಟ್:

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುತ್ತೆ ಅಂತ ಎಕ್ಸಿಟ್ ಪೋಲ್ ನ ಫಲಿತಾಂಶ ಹೊರ ಬಿದ್ದ ಸತ್ಯ ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ತನ್ನ ಅಸ್ತಿತ್ವವೇ ಕಳೆದುಕೊಳ್ಳುವ ಭರವಸೆ ಆಪ್ ಹುಟ್ಟುಹಾಕಿದೆ.

Punjab Election Results 2022: AAP heading for clean sweep, Congress, SAD stalwarts trailing

ಪಂಜಾಬಿಗಳ ಅಂಗಳದಲ್ಲಿ ಆಪ್:

ಪಂಜಾಬ್ ವಿಧಾನಸಭೆ ಚುನಾವಣೆಯ ಒಟ್ಟು ಸೀಟುಗಳು 117. ಅದರಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯ ಸೀಟುಗಳ ಸಂಖ್ಯೆ 59. ಆಮ್‌ ಆದ್ಮಿ ಪಾರ್ಟಿ ಈ ಬಾರಿ 69 ಸೀಟು ಗೆಲ್ಲುತ್ತೆ ಅಂತ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ವಾಸ್ತವದಲ್ಲಿ ಪಂಚಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಧಿಕಾರ ಚುಕ್ಕಾಣಿ ಹಿಡಿಯಲು ಬೇಕಾದ ಸೀಟುಗಳಿಗಿಂತಲು ದುಪ್ಪಟ್ಟು ಸೀಟು ಗೆಲ್ಲುವ ಭರವಸೆ ಆಫ್ ಮಡಿಸಿದೆ. ಕೇವಲ 16 ಸ್ಥಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಡಳಿತ ರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಸ್ಥಾನ ಅಲಂಕರಿಸಲು ಅನರ್ಹ ಎನ್ನುವ ಮಟ್ಟಿಗೆ ಕಳಪೆ ಸಾಧನೆ ತೋರಿದೆ. ಈಗಿನ ಪರಿಸ್ಥಿತಿ ನೋಡಿದ್ರೆ, ಭವಿಷ್ಯದಲ್ಲಿ ಕಾಂಗ್ರೆಸ್ ಪಂಚಾಬ್ ನಲ್ಲೂ ತನ್ನ ಅಸ್ತಿತ್ವ ಕಳೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.

ಪಂಜಾಬ್ 'ಹಸ್ತಂಗತ':

ಪಂಜಾಬ್ ನಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಹಸ್ತಂಗತವಾಗಿದೆ. ಕೇವಲ ಹದಿನಾರು ಸ್ಥಾನಗಳಲ್ಲಿ ಮನ್ನಡೆ ಸಾಧಿಸಿದ್ದಾರೆ. 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಶಿರೋಮಣಿ ಅಕಾಲಿಕ ದಳ ಮೂರನೇ ಸ್ಥಾನದಲ್ಲಿ ಕೂತಿದೆ. ಯಾವ ಆಯಾಮದಿಂದಲೂ ಕಾಂಗ್ರೆಸ್ ಮುನ್ನಡೆ ಸಾಧಿಸುವ ಅವಕಾಶಗಳೇ ಇಲ್ಲದಂತಾಗಿದೆ. ಸರ್ಕಾರ ರಚನೆಗೆ ಅಗತ್ಯ ಸೀಟುಗಳಿಗಿಂತಲೂ ಹೆಚ್ಚು ಸ್ಥಾನದಲ್ಲಿ ಆಪ್ ಜಯಭೇರಿಯತ್ತ ಸಾಗಿದೆ.

Punjab Election Results 2022: AAP heading for clean sweep, Congress, SAD stalwarts trailing

ಶೇ.42 ರಷ್ಟು ಮತ ಭೇಟೆ:

ಅಮ್ ಆದ್ಮಿ ಪಾರ್ಟಿ ಪಂಜಾಬ್ ನಲ್ಲಿ ಚನಾವಣೆಯಾದ ಮತಗಳಲ್ಲಿ ಶೇ. 42 ರಷ್ಟು ತನ್ನದಾಗಿಸಿಕೊಂಡಿದೆ. ಇದರಿಂದ ಆಪ್ ಪ್ರಭಾವ ಎಷ್ಟಿದೆ ಎಂಬುದನ್ನ ಊಹಿಸಬಹುದು. ಆಡಳಿತ ರೂಢ ಕಾಂಗ್ರೆಸ್ ಪಕ್ಷ ಗಳಿಸಿರುವ ಮತ ಪ್ರಮಾಣ ಶೇ. 23 ರಷ್ಟು. ಇದೇ ಪ್ರಮಾಣ ಅಂತಿಮವರೆಗೂ ಪಡೆಯುವ ಸಾಧ್ಯತೆಯಿದೆ. ಶಿರೋಮಣಿ ಅಕಾಲಿಕ ದಳ ಶೇ. 18 ರಷ್ಟು, ಭಾರತೀಯ ಜನತಾ ಪಾರ್ಟಿ ( ಬಿಜೆಪಿ) ಶೇ. 6 ರಷ್ಟು ಮತ ಗಳಿಸಿದೆ.

ಸಿಎಂ ಅಭ್ಯರ್ಥಿ ಮನೆ ಮುಂದೆ ಸಂಭ್ರಮ:

ಪಂಜಾಬ್‌ನ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಿವಾಸದ ಎದುರು ಅದಾಗಲೇ ಹಬ್ಬದ ಸಂಭ್ರಮ ಮನೆ ಮಾಡಿದೆ. ಆಮ್ ಆದ್ಮಿ ಪಾರ್ಟಿ ನಾಯಕರು, ಕಾರ್ಯರ್ಕರು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಆರತಿ ಬೆಳಗಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲವಡೆ ಬಣ್ಣದೋಕುಳಿ. ಅಂತೂ ದೆಹಲಿಗೆ ಸೀಮಿತವಾಗಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ದೇಶದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಇದು ಭವಿಷ್ಯದಲ್ಲಿ ಆಮ್ ಆದ್ಮಿ ದೇಶದ ಬಹುದೊಡ್ಡ ಪಕ್ಷವಾಗಿ ಬೆಳೆದು ನಿಲ್ಲುವ ಭರವಸೆಯನ್ನೂ ಮೂಡಿಸಿದೆ.

ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?

ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+