ಮತದಾನೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದ ಪ್ರಿಯಾಂಕಾ ಗಾಂಧಿ

Recommended Video

      Exit Poll 2019: ಮತದಾನೋತ್ತರ ಸಮೀಕ್ಷೆ ಒಂದು ಗಾಳಿ ಸುದ್ದಿ | Oneindia kannada

      ನವದೆಹಲಿ, ಮೇ 21: ಮತದಾನೋತ್ತರ ಸಮೀಕ್ಷೆ ಒಂದು ಗಾಳಿ ಸುದ್ದಿ ಇದನ್ನು ನಂಬಬೇಡಿ ಮೇ 23ರ ಫಲಿತಾಂಸದ ಬಗ್ಗೆ ಉತ್ತಮ ನಿರೀಕ್ಷೆ ಇಟ್ಟುಕೊಳ್ಳಿ ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ ಮಾಡಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಉತ್ತರ ಪ್ರದೇಶ ಸೇರಿ ದೇಶಾದ್ಯಂತ ಕಾಂಗ್ರೆಸ್‌ಗೆ ಮತ್ತೆ ಹೀನಾಯ ಸೋಲನ್ನು ಮತದಾನೋತ್ತರ ಸಮೀಕ್ಷೆಯಲ್ಲಿ ಉಲ್ಲೇಖಿಸಿದ್ದರಿಂದ ಪ್ರಿಯಾಂಕಾ ಈ ವಿಚಾರ ತಿಳಿಸಿದ್ದಾರೆ.

      ಕಾಂಗ್ರೆಸ್‌ ನ ಬಹುತೇಕ ನಾಯಕರು ಕೂಡ ಇದೇ ನಿಟ್ಟಿಲ್ಲಿ ಮಾತನಾಡಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಸಮೀಕ್ಷೆಯನ್ನು ಗಾಸಿಪ್ ಎಂದಿದ್ದಾರೆ. ಈಗ ಪ್ರಿಯಾಂಕಾ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

      Priyanka urges party workers to not lose hope

      ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 2 ಸೀಟು ಗೆಲ್ಲಲಿದೆ ಅದರಲ್ಲೂ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಗೆಲುವು ಸುಲಭವಲ್ಲ ಎನ್ನುವುದನ್ನೂ ಕೂಡ ಸಮೀಕ್ಷೆಗಳು ಹೇಳಿವೆ. ಈ ಬೆಳವಣಿಗೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

      ಸಮೀಕ್ಷೆಗಳು ವೈಜ್ಞಾನಿಕವಲ್ಲ, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಸಮೀಕ್ಷೆಯಂತೆ ಭಾರತದ ನಡೆದ ಸಮೀಕ್ಷೆಗಳು ಕೂಡ ಸುಳ್ಳಾಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+