ಮೊಘಲ್ ಉದ್ಯಾನಕ್ಕೆ ಫೆ.6 ರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ
ನವದೆಹಲಿ, ಫೆಬ್ರವರಿ 05: ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಫೆಬ್ರವರಿ 6 ರಿಂದ ಮಾರ್ಚ್ 10 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಫೆಬ್ರವರಿ 4ರಂದು ನಡೆಯಲಿರುವ ವಾರ್ಷಿಕ ಉದ್ಯಾನೋತ್ಸವವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಉದ್ಯಾನದಲ್ಲಿ ಕಾಲ ಕಳೆಯಬಹುದು. ನಿರ್ವಹಣೆಗಾಗಿ ಸೋಮವಾರ ಉದ್ಯಾನದ ಬಾಗಿಲು ಮುಚ್ಚಿರಲಿದೆ.

ಅಷ್ಟೇ ಅಲ್ಲದೆ ಸ್ಪಿರಿಚುವಲ್ ಗಾರ್ಡನ್, ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆಯೇ ಅದೇ ಗೇಟ್ ಮೂಲಕವೇ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.
ಉದ್ಯಾನದಲ್ಲಿ ಸುಂದರವಾದ ಹುಲ್ಲು, ಆಧ್ಯಾತ್ಮಿಕ ಉದ್ಯಾನ, ಗಿಡಮೂಲಿಕೆಯ ಗಾರ್ಡನ್ ಹಾಗೂ ಸಂಗೀತ ಉದ್ಯಾನವಿದೆ. ನೀರಿನ ಬಾಟಲಿ, ಕ್ಯಾಮರಾ, ರೇಡಿಯೋ, ಬ್ಯಾಗ್, ತಿಂಡಿ ಸೇರಿದಂತೆ ಯಾವುದೇ ವಸ್ತುಗಳನ್ನು ಉದ್ಯಾನಕ್ಕೆ ತರುವಂತಿಲ್ಲ. ಶೌಚಾಲಯ, ಪ್ರಥಮ ಚಿಕಿತ್ಸೆ , ವೈದ್ಯಕೀಯ ಸೌಲಭ್ಯವನ್ನು ಅಲ್ಲಿಯೇ ಒದಗಿಸಲಾಗುತ್ತದೆ.

ರಾಷ್ಟ್ರಪತಿ ಭವನದ ವೆಬ್ ಸೈಟ್ ನಲ್ಲಿ 50 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಆಧಾರ್ ಕಾರ್ಡ್, ಮತದಾರರ ಚೀಟಿ ಇನ್ನಿತರೆ ವೆಬ್ ಸೈಟ್ ನಲ್ಲಿ ಕೇಳುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.












Click it and Unblock the Notifications