• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ

|
Google Oneindia Kannada News
   Lok Sabha Elections 2019 : ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ | Oneindia Kannada

   ನವದೆಹಲಿ, ಮಾರ್ಚ್ 13: ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಬಾಲಿವುಡ್ ತಾರೆಯರು, ಕ್ರೀಡಾಪಟುಗಳು, ಮಾಧ್ಯಮ ಲೋಕದ ದಿಗ್ಗಜರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

   ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಆಮಿರ್ ಖಾನ್, ವಿಕಿ ಕೌಶಾಲ್ ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್; ಗಾಯಕಿ ಲತಾ ಮಂಗೇಷ್ಕರ್, ಸಂಗೀತ ನಿರ್ದೇಶ ಎ ಆರ್ ರೆಹಮಾನ್, ಕ್ರೀಡಾ ಲೋಕದ ದಿಗ್ಗಜರಾದ ವಿರಾಟ್ ಕೋಹ್ಲಿ, ಎಂ ಎಸ್ ಧೋನಿ, ಅನಿಲ್ ಕುಂಭ್ಳೆ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ತಾರೆಗಳಿಗೆ ಟ್ಯಾಗ್ ಮಾಡುವ ಮೂಲಕ ಮತದಾನದ ಮಹತ್ವದ ಅರಿವು ಮೂಡಿಸುವಂತೆ ಮನವಿ ಮಾಡಿದ್ದಾರೆ.

   ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

   ಜೊತೆಗೆ ಮಾಧ್ಯಮ ಲೋಕದ ದಿಗ್ಗಜರನ್ನೂ ಟ್ಯಾಗ್ ಮಾಡಿ ಮೋದಿ ಮನವಿ ಮಾಡಿದ್ದಾರೆ. ಯೋಗ ಗುರು ಬಾಬಾ ರಾಮದೇವ್, ಸದ್ಗುರು ಜಗ್ಗಿವಾಸುದೇವ ಅವರಿಗೂ ಮೋದಿ ಮನವಿ ಮಾಡಿದ್ದಾರೆ. ಜೊತೆಗೆ ವಿಪಕ್ಷದ ನಾಯಕರಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮುಂತಾದವರನ್ನೂ ಮೋದಿ ಮನವಿ ಮಾಡಿರುವುದು ವಿಶೇಷ.

   ಅಷ್ಟಕ್ಕೂ ಮೋದಿಯವರು ಯಾರಿಗೆಲ್ಲ ಮನವಿ ಮಾಡಿದ್ದಾರೆ? ಆಯ್ದ ಟ್ವೀಟ್ ಗಳು ಇಲ್ಲಿವೆ.

   ರಾಹುಲ್ ಗಾಂಧಿ, ಮಮತಾ ದೀದಿ ಗೂ ಮನವಿ

   ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತೆ ನಾನು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಎಂಕೆ ಸ್ಟಾಲಿನ್ ಅವರಲ್ಲಿ ಮನವಿ ಮಾಡುತ್ತೇನೆ -ನರೇಂದ್ರ ಮೋದಿ, ಪ್ರಧಾನಿ

   ಎಚ್ ಡಿ ಕುಮಾರಸ್ವಾಮಿಗೂ ಮನವಿ

   ಈ ಚುನಾವಣೆಯಲ್ಲಿ ಗರಿಷ್ಠ ಭಾರತೀಯರು ಮತಗಟ್ಟೆಗೆ ಬಂದು ಮತಚಲಾಯಿಸಿ ಭಾರತವನ್ನು ಮತ್ತಶಃ್ಟು ಬಲಗೊಳಿಸುವಂತೆ ಮಾಡಲಿ ಎಂದು ಕೆ.ಚಂದ್ರಶೇಖರ್ ರಾವ್, ನವೀನ್ ಪಟ್ನಾಯಕ್, ಎಚ್ ಡಿ ಕುಮಾರಸ್ವಾಮಿ, ಎಚ್ ಚಂದ್ರಬಾಬು ನಾಯ್ಡು ಅವರಿಗೂ ನಾನು ಮನವಿ ಮಾಡುತ್ತೇನೆ- ನರೇಂದ್ರ ಮೋದಿ, ಪ್ರಧಾನಿ

   ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್

   ಬಾಬಾ ರಾಮದೇವ್-ಸದ್ಗುರು

   ಶ್ರೀ ರವಿಶಂಕರ ಗುರೂಜಿ, ಸದ್ಗುರು ಜಗ್ಗಿ ವಾಸುದೇವ ಮತ್ತು ಬಾಬಾ ರಾಮದೇವ್ ರಂಥ ಅಧ್ಯಾತ್ಮ ಮುಖಂಡರು ಈಗಾಗಲೇ ಹಲವರಲ್ಲಿ ಸ್ಫೂರ್ತಿ ತುಂಬಿದ್ದೀರಿ. ಅದೇ ರೀತಿ ಮತದಾನದ ಕುರಿತೂ ಅರಿವು ಮೂಡಿಸಲು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ -ನರೇಂದ್ರ ಮೋದಿ, ಪ್ರಧಾನಿ

   ವಿಕ್ಕಿ ಕೌಶಾಲ್ನನ್ನ ಯುವ ಗೆಳೆಯರಾದ ರಣ್ವೀರ್ ಸಿಂಗ್, ವರುಣ್ ಧವನ್ ಮತ್ತು ವಿಕ್ಕಿ ಕೌಶಾಲ್ ಅವರೇ ಹಲವು ಯುವಕರಿಗೆ ನೀವೆಂದರೆ ಅಕ್ಕರೆ. ಅವರಿಗೆಲ್ಲ ''ನಿಮ್ಮ ಸಮಯ ಈಗ ಬಂದಿದೆ, ಜೋಶ್ ನಲ್ಲಿ ಹೋಗಿ ಮತಚಲಾಯಿಸಿ" ಎನ್ನುವ ಸಮಯ ಬಂದಿದೆ- ನರೇಂದ್ರ ಮೋದಿ, ಪ್ರಧಾನಿ

   ನನ್ನ ಯುವ ಗೆಳೆಯರಾದ ರಣ್ವೀರ್ ಸಿಂಗ್, ವರುಣ್ ಧವನ್ ಮತ್ತು ವಿಕ್ಕಿ ಕೌಶಾಲ್ ಅವರೇ ಹಲವು ಯುವಕರಿಗೆ ನೀವೆಂದರೆ ಅಕ್ಕರೆ. ಅವರಿಗೆಲ್ಲ ''ನಿಮ್ಮ ಸಮಯ ಈಗ ಬಂದಿದೆ, ಜೋಶ್ ನಲ್ಲಿ ಹೋಗಿ ಮತಚಲಾಯಿಸಿ" ಎನ್ನುವ ಸಮಯ ಬಂದಿದೆ- ನರೇಂದ್ರ ಮೋದಿ, ಪ್ರಧಾನಿ

   ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಚಾರದ ಕಣಕ್ಕಿಳಿಯಲಿರುವ ಮಮತಾವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಚಾರದ ಕಣಕ್ಕಿಳಿಯಲಿರುವ ಮಮತಾ

   ಅನುಷ್ಕಾ ಶರ್ಮಾ

   ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ - ನರೇಂದ್ರ ಮೋದಿ, ಪ್ರಧಾನಿ

   ಮಾಧ್ಯಮ ರಂಗಕ್ಕೆ

   ರುಬಿಕಾ ಲಿಯಾಖತ್, ಅಂಜನಾ ಓಂ ಕಶ್ಯಪ್, ಸುಧೀರ್ ಚೌಧರಿ, ರಾಹುಲ್ ಕನ್ವಾಲ್ ಮತ್ತು ರಿಪಬ್ಲಿಕ್ ತಂಡದ ಬಳಿ ನನ್ನ ಮನವಿ. ಜನರಲ್ಲಿ ಮತದಾನದ ದಾಖಲಾತಿ, ಮತ್ತು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ. ಅದರಲ್ಲೂ ಯುವಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ. ನಿಮ್ಮ ಬೆಂಬಲದಿಂದ ಮತದಾನ ಖಂಡಿತವಾಗಿಯೂ ಹೆಚ್ಚಾಗುತ್ತದೆ- ನರೇಂದ್ರ ಮೋದಿ

   ಅಮಿತಾಬ್ ಬಚ್ಚನ್

   ಅಮಿತಾಬ್ ಬಚ್ಚನ್, ಶಾರೂಖ್ ಖಾನ್ ಮತ್ತು ಕರಣ್ ಜೋಹರ್ ಅವರೇ, ಈ ಬಾರಿ ಹೆಚ್ಚಿನ ಮತದಾನ ಮಾಡಲು ನೀವು ಕೈಜೋಡಿಸುವುದಾಗಿ ನನಗೆ ಭರವಸೆ ನೀಡಿ. ಏಕೆಂದರೆ ಮತದಾನ ಎಂದರೆ ನಮ್ಮ ಪ್ರಜಾಪ್ರಭುತ್ವವನ್ನು ಪ್ರೀತಿಸುವುದು ಮತ್ತು ಅದನ್ನು ಬಲಗೊಳಿಸುವುದು- ನರೇಂದ್ರ ಮೋದಿ

   English summary
   PM Narendra Modi tags may celebrities on his twitter account and requested them to create awarness about casting vote.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X