ರಫೇಲ್ ಡೀಲ್ ಬಗ್ಗೆ ಕಾಂಗ್ರೆಸ್‌ನದ್ದು ಸುಳ್ಳು ಆರೋಪ: ಅನಂತ್‌ಕುಮಾರ್
ನವದೆಹಲಿ, ಜುಲೈ 23: ರಫೆಲ್ ಒಪ್ಪಂದದ ವಿಷಯದಲ್ಲಿ ಪ್ರತಿಪಕ್ಷಗಳ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಕೇಂದ್ರ ಮಂತ್ರಿ ಅನಂತ್‌ಕುಮಾರ್ ಆರೋಪ ಮಾಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ವಿಷಯದಲ್ಲಿ ಪಾರದರ್ಶಕ ವಾದ ಒಪ್ಪಂದ ಆಗಿದ್ದು, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ರಕ್ಷಣಾ ಸಚಿವರು ಸಮರ್ಪಕವಾದ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.

ಅವಿಶ್ವಾಸ ನಿರ್ಣಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಬೆಂಬಲ ನರೇಂದ್ರಮೋದಿ ಅವರಿಗೆ ದೊರೆತಿದೆ ಇದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗಾದ ಮೊದಲ ಭೂಕಂಪದ ಅನುಭವ, ರಾಹುಲ್ ಅವರನ್ನು ಪ್ರಧಾನಿ ಹುದ್ದೆಗೆ ನಿರ್ದೇಶನ ಮಾಡುವ ಮೂಲಕ ಮಹಾಘಟಬಂಧನದ ಒಗ್ಗಟ್ಟಿಗೆ ಎರಡನೇ ಭೂಕಂಪ ಬಂದಂತಾಗಿದೆ ಎಂದು ಅನಂತ್‌ಕುಮಾರ್ ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications