Get Updates
Get notified of breaking news, exclusive insights, and must-see stories!

ವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದು

ನವದೆಹಲಿ, ಮಾರ್ಚ್ 13: ಇಥಿಯೋಪಿಯಾದಲ್ಲಿ ವಿಮಾನ ದುರಂತದಲ್ಲಿ 157 ಮಂದಿ ಮೃತಪಟ್ಟಿದ್ದರು ಅದರಲ್ಲಿ ಭಾರತದ ಶಿಖಾ ಗರ್ಗ್ ಕೂಡ ಒಬ್ಬರು. ದುರಂತಕ್ಕೂ ಮುನ್ನ ಆಕೆ ಪತಿಗೆ ಕಳುಹಿಸಿದ ಸಂದೇಶ ಹೀಗಿತ್ತು.

ಸಾವಿನ ಕೊನೆಯ ಘಳಿಗೆಯಲ್ಲಿ ವಿಮಾನ ಲ್ಯಾಂಡ್​ ಆದ ನಂತರ ಕರೆ ಮಾಡುವುದಾಗಿ ತನ್ನ ಪತಿಗೆ ಸಂದೇಶ ಕಳುಹಿಸಿದ್ದರು ಎಂಬುದು ವರದಿಯಾಗಿದೆ. ನೈರೋಬಿ ಮೂಲದ ಇಥಿಯೋಪಿಯಾ ಏರ್​ಲೈನ್ಸ್​ನ​ ವಿಮಾನ ಪತನದಲ್ಲಿ ದುರಂತ ಸಾವಿಗೀಡಾದ ಭಾರತೀಯ ಮೂಲದ ನವ ವಿವಾವಿತೆಯಾಗಿದ್ದರು.

ಶಿಖಾ ಪರಿಸರ ಇಲಾಖೆಯಲ್ಲಿ ವಿಶ್ವಸಂಸ್ಥೆಯ ಸಲಹೆಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಗಾರ್ಗ್​ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಮೂರು ವರ್ಷಗಳ ಕಾಲ ಡೇಟಿಂಗ್​ ಮಾಡಿದ್ದ ಭಟ್ಟಾಚಾರ್ಯ ಎಂಬುವರ ಜತೆಯಲ್ಲಿ ಗಾರ್ಗ್​ ಸಪ್ತಪದಿ ತುಳಿದಿದ್ದರು.

Newly-wed Indian woman had texted husband before Ethiopia crash

ಭಟ್ಟಾಚಾರ್ಯ ಅವರು ಕೂಡ ಗಾರ್ಗ್​ ಜತೆಯಲ್ಲೇ ನೈರೋಬಿಗೆ ಪ್ರಯಾಣ ಬೆಳಸಬೇಕಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ತುರ್ತು ಸಭೆ ಇದ್ದುದ್ದರಿಂದ ದೆಹಲಿಯಲ್ಲಿಯೇ ಉಳಿಯಬೇಕಾಯಿತು. ಬಳಿಕ ಗಾರ್ಗ್​ ತನ್ನ ಪತಿಗೆ ನಾನು ವಿಮಾನದಲ್ಲಿದ್ದೇನೆ. ಅದು ಲ್ಯಾಂಡ್​ ಆಗುತ್ತಿದ್ದಂತೆ ನಾನು ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿದ್ದರು.

ಗಾರ್ಗ್​ ಮತ್ತು ಭಟ್ಟಾಚಾರ್ಯರು ದೆಹಲಿಯಲ್ಲೇ ವಾಸವಾಗಿದ್ದರು. ಪತ್ನಿ ನೈರೋಬಿಯಿಂದ ಬಂದ ನಂತರ ವಿಹಾರಕ್ಕೆ ತೆರಳುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಗಾರ್ಗ್​ ಭಾರತೀಯ ಪರಿಸರ ಸಚಿವಾಲಯದ ಸಮಾಲೋಚಕರಾಗಿದ್ದು, 2015 ರ ಪ್ಯಾರಿಸ್ ಹವಾಮಾನ ಒಪ್ಪಂದದ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.

ಭಾನುವಾರ ನಭಕ್ಕೆ ನೆಗೆಯುತ್ತಿದ್ದ ಆರು ನಿಮಿಷದೊಳಗೆ ನೆಲಕ್ಕಪ್ಪಳಿಸಿದ ಇಟಿ 302 ವಿಮಾನ, ಅಡಿಸ್ ಅಬಾಬಾದಿಂದ 60 ಕಿ.ಮೀ. ದೂರದಲ್ಲಿ ಬಿದ್ದು ಭಸ್ಮವಾಗಿದೆ. ಈ ವಿಮಾನದಲ್ಲಿ 35 ರಾಷ್ಟ್ರಗಳ ನಾಗರಿಕರು ಪ್ರಯಾಣಿಸುತ್ತಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+