15 ವರ್ಷದ ಮಗಳನ್ನು 1 ಲಕ್ಷಕ್ಕೆ ಮಾರಾಟ ಮಾಡಿದ ಮಹಾತಾಯಿ

ನವದೆಹಲಿ,ಸೆಪ್ಟೆಂಬರ್ 16: ಹದಿನೈದು ವರ್ಷದ ಮಗಳನ್ನು 1 ಲಕ್ಷ ರೂಗೆ ಮಾರಾಟಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ನನ್ನನ್ನ ಅಷ್ಟೇ ಅಲ್ಲ ಒಂದು ವರ್ಷದ ನನ್ನ ತಮ್ಮನನ್ನು ಕೂಡ ಅಮ್ಮ ಮಾರಾಟ ಮಾಡಿದ್ದಾಳೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಕಳೆದ ವಾರ ತಾಯಿ ಬಾದರ್‌ಪುರದಲ್ಲಿರುವ ತನ್ನ ತಂಗಿಯ ಮನೆಗೆ ಹೋಗಬೇಕು ಜೊತೆಯಲ್ಲಿ ಬಾ ಎಂದು ಕರೆದುಕೊಂಡು ಹೋಗಿ ಹೋಟೆಲ್‌ವೊಂದರಲ್ಲಿ ಬಿಟ್ಟಿದ್ದಳು. ಅದಾದ ಬಳಿಕ ನನಗೆ ಸ್ವಲ್ಪ ಕೆಲಸವಿದೆ ನಾನು ಹೋಗುತ್ತೇನೆ, ವ್ಯಕ್ತಿಯೊಬ್ಬ ಬಂದು ನಿನ್ನ ಪಿಕ್‌ಅಪ್ ಮಾಡಿ ಮನೆಗೆ ಬಿಡುತ್ತಾನೆ ಎಂದು ಹೇಳಿ ಹೋಗಿದ್ದಳು.

Mother Was Under Debt And She Sold Daughter To Pay If Off

ಆತ ಬಾಲಕಿಯನ್ನು ಅವಳ ಮನೆಗೆ ಬಿಡುವ ಬದಲು ಆತನ ಮನೆಗೆ ಕೊಂಡೊಯ್ದಿದ್ದ, ಅಲ್ಲಿ ಇನ್ನೂ ಹಲವು ಯುವತಿಯರಿದ್ದರು.ಆಕೆಯ ಕೈಗೆ ಮದುವೆ ವಸ್ತ್ರವನ್ನು ನೀಡಿ ನಿನ್ನನ್ನು ನಿನ್ನ ತಾಯಿ ನನಗೆ ಮಾರಾಟ ಮಾಡಿದ್ದಾಳೆ. ಮೊದಲು ಈ ಬಟ್ಟೆ ಹಾಕಿಕೊಂಡು ತಯಾರಾಗು ಎಂದು ಗದರಿಸಿದ್ದಾನೆ.

ಆತ ಇಲ್ಲದ ಸಮಯ ನೋಡಿ ಆಕೆ ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ, ಅಲ್ಲಿ ಸ್ಥಳೀಯರ ಸಹಾಯ ಪಡೆದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.

ತಾಯಿ ಸಾಕಷ್ಟು ಕಡೆ ಸಾಲ ಮಾಡಿಕೊಂಡಿದ್ದರು, ಅದನ್ನು ತೀರಿಸಿಲು ನನ್ನನ್ನು ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಹುಟುಕಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+