ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್

ನವದೆಹಲಿ, ಅಕ್ಟೋಬರ್ 09: ನೋಯ್ಡಾದ ವಿಶ್ವವಿದ್ಯಾಲಯವೊಂದರಲ್ಲಿ ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಇಶಾ ಬಹಾಳ್ ಒಂದು ದಿನದ ಮಟ್ಟಿಗೆ ಬ್ರಿಟಿಶ್ ಹೈಕಮಿಶನರ್ ಆಗಿ ದಾಖಲೆ ಬರೆದಿದ್ದಾರೆ.

ಅಕ್ಟೋಬರ್ 11 ರಂದು 'ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ'ದ ಹಿನ್ನೆಲೆಯಲ್ಲಿ ಬ್ರಿಟಿಶ್ ಹೈ ಕಮಿಷನ್ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. 18 ರಿಂದ 23 ದವರಿಗಾಗಿ ಏರ್ಪಡಿಸಿರುವ ಈ ಸ್ಪರ್ಧೆಯಲ್ಲಿ ಗೆದ್ದ ಇಶಾ ಒಂದು ದಿನದ ಮಟ್ಟಿಗೆ ಬ್ರಿಟಿಶ್ ಹೈ ಕಮಿಶನರ್ ಆದರು.

"ಲಿಂಗ ಸಮಾನತೆ ಎಂದರೆ ನಿಮ್ಮ ಪ್ರಕಾರ ಏನು?"(What does gender equality mean to you?) ಎಂಬುದು ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ವಿಡಿಯೋವೊಂದರ ಮೂಲಕ ಉತ್ತರ ನೀಡಬೇಕಿತ್ತು. ದೇಶದಾದ್ಯಂತ 58 ಮಹಿಳೆಯರು ಕಳಿಸಿದ್ದ ವಿಡಿಯೋದಲ್ಲಿ ಇಶಾ ಬಹಾಳ್ ಕಳಿಸಿದ್ದ ವಿಡಿಯೋ ಹೆಚ್ಚು ಪರಿಣಾಮಕಾರಿಯಾಗಿದ್ದರಿಂದ ಅವರನ್ನು ವಿಜೇತೆ ಎಂದು ಘೋಷಿಸಿ, ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆಗುವ ಅವಕಾಶ ನೀಡಲಾಯಿತು.

Meet Indian student who becomes one day British high commissioner

"ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆಗಿ ನಿಯುಕ್ತಿಯಾಗಿದ್ದು ನನ್ನ ಅದೃಷ್ಟ. ಅದೊಂದು ಅದ್ಭುತ ಅನುಭವ. ಈ ಮೂಲಕ ಬಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧದ ಬಗ್ಗೆ ನಾನು ತಿಳಿದುಕೊಂಡೆ. ಅಲ್ಲದೆ ಸಮಾನತೆಯ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಅವಕಾಶ ಸಿಕ್ಕಿತು" ಎಂದು ಇಶಾ ಬಹಾಳ್ ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+