ಮೇ 23 ಮೋದಿ ದಿನವಾಗಲಿ: ಬಾಬಾ ರಾಮ್‌ದೇವ್
ನವದೆಹಲಿ, ಮೇ 28:2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಭರ್ಜರಿ ಜಯ ಗಳಿಸಿದೆ.
ಈ ಫಲಿತಾಂಶ ನೀಡಿದ ಮೇ 23ರನ್ನು ನರೇಂದ್ರ ಮೋದಿ ದಿನ ಎಂದು ಆಚರಿಸ ಬೇಕು ಎನ್ನುವುದು ಯೋಗಗುರು ಬಾಬಾ ರಾಮ್‌ದೇವ್ ಆಗ್ರಹವಾಗಿದೆ.
ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್‌ದೇವ್ ಹೊಸ ಐಡಿಯಾ
'ಒಂದು ಕಡೆ ಮಹಾಘಟಬಂಧನ ಇನ್ನೊಂದೆಡೆ ಮೋದಿ ಏಕಾಂಗಿಯಾಗಿದ್ದರು, ಇಡೀ ಚುನಾವಣೆಯಲ್ಲಿ ಏಕಾಂಗಿಯಾಗಿ ಅವರು ಹೋರಾಡಿದರು, ಉತ್ತರ ಪ್ರದೇಶ ಹಾಗೂ ದೇಶದ ಜನ ಮೋದಿಯ ಕೈಬಿಡಲಿಲ್ಲ, ಇನ್ನಷ್ಟು ಬಲಿಷ್ಠಗೊಳಿಸಿದರು.
ಮೇ 23ರಂದು ಬಿಜೆಪಿ ಭರ್ಜರಿಜಯಗಳಿಸಿದೆ. ಹೀಗಾಗಿ ಮೇ 23ನ್ನು ಮೋದಿ ದಿನ ಅಥವಾ ಲೋಕಕಲ್ಯಾನ ದಿನ ಎಂದು ಆಚರಿಸಬೇಕು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ನೋಟು ನಿಷೇಧ ಕ್ರಮ: ಮೋದಿಯನ್ನು ಟೀಕಿಸಿದ ಬಾಬಾ ರಾಮ್‌ದೇವ್
ಮೊದಲಿನಿಂದಲೂ ಮೋದಿ ಸಮರ್ಥಕರಾಗಿರುವ ಬಾಬಾ ರಾಮ್‌ದೇವ್ ಚುನಾವಣೆಗೆ ಐದಾರು ತಿಂಗಳಿರುವಾಗ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಚುನಾವಣೆ ಆರಂಭವಾಗುವಷ್ಟರಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು.
ಕಪ್ಪು ಹಣ ಹಿಂದೆ ತರುವುದು, ಗೋಹತ್ಯೆ ನಿಷೇಧ ಹಾಗೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಈಗಲೂ ದೊಡ್ಡ ಪ್ರತಿಪಾದಕರಾಗಿದ್ದಾರೆ.