ಯುಎಸ್ ಎಐಡಿ ಹೊಸ ಯೋಜನಾ ನಿರ್ದೇಶಕ ಮಾರ್ಕ್ ಎ ವೈಟ್

ನವದೆಹಲಿ, ಮಾರ್ಚ್ 7: ಮಾರ್ಕ್ ಎ ವೈಟ್ ಅವರು ಯುಎಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ (ಯುಎಸ್ ಎಐಡಿ)ನ ಭಾರತದ ಹೊಸ ಯೋಜನಾ ನಿರ್ದೇಶಕರಾಗಿದ್ದಾರೆ. ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ವಿಚಾರವಾಗಿ ಭಾರತದ ಮಾನವ ಹಾಗೂ ಆರ್ಥಿಕ ಸಂಪನ್ಮೂಲದ ಸವಾಲುಗಳನ್ನು ಎದುರಿಸಲು ಯುಎಸ್ ಎಐಡಿ ನೆರವಾಗಲಿದೆ.

ಫೆಬ್ರವರಿ 24ರಂದು ವಾಷಿಂಗ್ಟನ್ ನಲ್ಲಿ ವೈಟ್ ಅವರು ಈ ಜವಾಬ್ದಾರಿಯನ್ನು ಸ್ವೀಕರಿಸಿದರು. ನಾಲ್ಕು ಖಂಡಗಳ ಮೂವತ್ತು ವಿವಿಧ ದೇಶಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ವೈಟ್ ಅವರಿಗಿದೆ. ಜತೆಗೆ ಯುಎಸ್ ಆರ್ಮಿ ವಾರ್ ಕಾಲೇಜಿನಲ್ಲಿ ಫ್ರೊಫೆಸರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

Mark A. White sworn in as mission director to USAID-India

ವೈಟ್ ಅವರು ಅಭಿವೃದ್ಧಿ ವಿಚಾರವಾಗಿ ಮಾಡಿದ ಕೆಲಸಗಳಿಗೆ ಹಲವಾರು ಪ್ರಶಸ್ತಿ, ಗೌರವ-ಪುರಸ್ಕಾರಗಳು ಲಭ್ಯವಾಗಿವೆ. ಕಾಂಬೋಡಿಯಾದಲ್ಲಿ ಮಾಡಿದ ಅತ್ಯುತ್ತಮ ಕೆಲಸಕ್ಕೆ ಮತ್ತು ಅಫಘಾನಿಸ್ತಾನದಲ್ಲಿ ಆರೋಗ್ಯ ವಿಚಾರದಲ್ಲಿ ತಂಡವಾಗಿ ಮಾಡಿದ ಕೆಲಸಕ್ಕೆ ಅಮೆರಿಕದ ರಾಷ್ಟ್ರಪತಿಗಳ ಚಿನ್ನದ ಪದಕ ಕೂಡ ಪಡೆದಿದ್ದಾರೆ.

ಲೂಸಿಯಾನದ ಕ್ಸೇವಿಯರ್ ವಿವಿಯಿಂದ ವಿಜ್ಞಾನ ಪದವಿ, ಉತ್ತರ ಕರೋಲಿನಾದ ವಿವಿಯಿಂದ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವೈಟ್ ವಿವಾಹಿತರು. ಅವರ ಪತ್ನಿ ಹೆಸರು ಚಾನ್ ತೇರಿ ವೈಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+