ತಮ್ಮ ಜೀವನಗಾಥೆ ಪಠ್ಯವಾಗುವುದು ಬೇಡವೆಂದ ಮೋದಿ

ನವದೆಹಲಿ, ಮೇ 30: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುತ್ತಿದ್ದಂತೆ ಅವರ ಜೀವನಗಾಥೆಯನ್ನು ಶಾಲಾ ಮಕ್ಕಳಿಗೆ ಪಠ್ಯವಾಗಿಸಬೇಕು ಎಂದು ಮೋದಿ ಬೆಂಬಲಿಗರು ಆಶಿಸಿದ್ದರು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತಿನಲ್ಲಿ ಈಗಾಗಲೇ ಈ ಪ್ರಸ್ತಾವನೆಗೆ ಅಂಕಿತ ಬೀಳುವ ಲಕ್ಷಣಗಳೂ ಇವೆ.

ಈ ಮಧ್ಯೆ ಕೆಲ ರಾಜ್ಯ ಸರಕಾರಗಳ ಈ ಪ್ರಯತ್ನಕ್ಕೆ ತಣ್ಣೀರು ಎರಚಿರುವ ಪ್ರಧಾನಿ ಮೋದಿ ತಮ್ಮ ಕುರಿತಾದ ಪಠ್ಯ ಅಳವಡಿಕೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

lessons-on-life-of-modi-in-school-curriculum-modi-says-no

ಸ್ವತಃ ನರೇಂದ್ರ ಮೋದಿ ಅವರೇ ಇದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ನರೇಂದ್ರ ಮೋದಿಯ ಜೀವನದ ಹೋರಾಟವನ್ನೊಳಗೊಂಡ ಪಾಠವನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಚಿಂತನೆ ನಡೆದಿದೆ ಎಂಬ ಸುದ್ದಿ ನನ್ನ ಕಿವಿಗೂ ಬಿದ್ದಿದೆ. ಆದರೆ ಜೀವಂತ ವ್ಯಕ್ತಿಗಳನ್ನು ಪಠ್ಯದಲ್ಲಿ ಅಳವಡಿಸುವುದು ಸಮಂಜಸವಲ್ಲ ಎಂಬುದು ನನ್ನ ಬಲವಾದ ಅನಿಸಿಕೆ ಎಂದು ಪ್ರತಿಪಾದಿಸಿದ್ದಾರೆ.

'ಭಾರತದ ಇತಿಹಾಸವು ಅನೇಕ ಮಹಾಮಹಿಮ ನಾಯಕರಿಂದ ತುಂಬಿದೆ. ಇಂದಿನ ಭಾರತಕ್ಕೆ ಅವರೆಲ್ಲಾ ಅದ್ಭುತ ಕಾಣಿಕೆ ನೀಡಿದ್ದಾರೆ. ಎಳೆಯ ಮನಸ್ಸುಗಳು ಅಂತಹವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅವರನ್ನು ಅನುಸರಿಸಬೇಕು ಎಂಬುದು ನನ್ನ ಆಶಯ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+