ಜೆಎನ್ ಯು ವಿದ್ಯಾರ್ಥಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ನವದೆಹಲಿ, ಮೇ 17: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ ಯು) ವಿದ್ಯಾರ್ಥಿ ವಿ.ವಿ.ಯ ಸ್ಟಡಿ ರೂಮ್ ನಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಎಂ.ಎ., ಎರಡನೇ ವರ್ಷದ ವಿದ್ಯಾರ್ಥಿ ರಿಷಿ ಜೋಶುವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಇಂಗ್ಲಿಷ್ ಪ್ರೊಫೆಸರ್ ಗೆ ಆತ್ಮಹತ್ಯಾ ಪತ್ರ ಇಮೇಲ್ ಮಾಡಿದ್ದಾನೆ.
ಪೊಲೀಸರಿಗೆ ಮಾಹಿತಿ ದೊರೆತ ಮೇಲೆ ಸ್ಥಳಕ್ಕೆ ತಲುಪಿದ್ದಾರೆ. ಆ ನಂತರ ನೀಡಿದ ಮಾಹಿತಿ ಪ್ರಕಾರ: ಲೈಬ್ರರಿ ಕಟ್ಟಡದ ಒಂದು ಕೋಣೆಯಲ್ಲಿ ಒಳ ಭಾಗದಿಂದ ಬಾಗಿಲು ಹಾಕಿಕೊಂಡಿರುವುದು ಕಂಡುಬಂದಿದೆ. ಬಾಗಿಲು ತಟ್ಟಿದರೂ ಒಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಗಿ ಹೇಳಿದ್ದಾರೆ.

ಕಿಟಕಿಯಿಂದ ನೋಡಿದಾಗ ಫ್ಯಾನ್ ಗೆ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ನಮಗೆ ಕಾಣಿಸಿತು. ಆ ನಂತರ ಬಲವಂತವಾಗಿ ಬಾಗಿಲು ತೆರೆದು, ಕೇಬಲ್ ಕತ್ತರಿಸಿ ಶವವನ್ನು ಕೆಳಗೆ ಇಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರಿಷಿ ಜೋಶುವಾ ಆರೋಗ್ಯ ಸಮಸ್ಯೆಯೊಂದಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಶಂಕೆ ಇಲ್ಲ. ಆದರೂ ತನಿಖೆ ಮುಂದುವರಿದಿದೆ.












Click it and Unblock the Notifications