ವೆಬ್‌ಸೈಟ್‌ಗೆ ಕನ್ನ ಹಾಕಿ ಜನ್ಮದಿನದ ಶುಭಾಶಯ ಕೋರಿದ ಭೂಪ

ನವದೆಹಲಿ, ಮೇ 22: ತಮ್ಮ ಅತ್ಯಂತ ಪ್ರೀತಿಪಾತ್ರರಿಗೆ ಜನ್ಮದಿನದ ಶುಭಾಶಯ ಹೇಳಲು ಕೆಲವರು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಾರೆ. ಇಲ್ಲೊಬ್ಬ ಭೂಪ ವೆಬ್‌ಸೈಟ್‌ಅನ್ನೇ ಹ್ಯಾಕ್ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾನೆ.

ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯುನಿವರ್ಸಿಟಿಯ ಅಧಿಕೃತ ವೆಬ್‌ಸೈಟ್ ಅನ್ನು ತೆರೆದವರಿಗೆ ಕಾಣಿಸಿದ್ದು, 'ಹ್ಯಾಪಿ ಬರ್ಥಡೇ ಪೂಜಾ. ಯುವರ್ ಲವ್' ಎಂಬ ಸಾಲುಗಳು. ಇದು ತನ್ನ ಗೆಳತಿಗೆ ಶುಭಾಶಯ ಕೋರಲು ಮಾಡಿದ ಪ್ರೇಮಿಯೊಬ್ಬನ ಕೃತ್ಯ ಇರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಂಗಳವಾರ ಮಧ್ಯರಾತ್ರಿ ವೆಬ್‌ಸೈಟ್‌ಗೆ ಕನ್ನ ಹಾಕಲಾಗಿದ್ದು, ವೆಬ್‌ಸೈಟ್ ಬಳಕೆದಾರರಿಗೆ 'ಹ್ಯಾಪಿ ಬರ್ಥಡೇ ಪೂಜಾ. ಯುವರ್ ಲವ್' ಎಂಬ ವಾಕ್ಯ ಕಾಣಿಸಿದೆ.

ಯಾವುದೇ ಸಂಘಟನೆ ಈ ಕೃತ್ಯಕ್ಕೆ ಹೊಣೆ ಹೊತ್ತುಕೊಂಡಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.

ಕೆಲವು ಕಿಡಿಗೇಡಿಗಳು ಕೀಟಲೆಗಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಹ್ಯಾಕರ್‌ನನ್ನು ಪತ್ತೆ ಮಾಡಿದ ಬಳಿಕ 'ಪೂಜಾ' ಯಾರು ಎಂಬುದು ಸಹ ಗೊತ್ತಾಗಬಹುದು!

Jamia Millia Islamia Universitys Official Website Hacked

ಕೂಡಲೇ ತಾಂತ್ರಿಕ ಪರಿಣತರು ಹ್ಯಾಕ್ ಆಗಿದ್ದ ವೆಬ್‌ಸೈಟ್‌ಅನ್ನು ಸರಿಪಡಿಸಿದ್ದಾರೆ. ಆದರೆ, ವೆಬ್‌ಸೈಟ್ ಹ್ಯಾಕ್ ಟ್ವಿಟ್ಟರ್‌ನಲ್ಲಿ ತಮಾಷೆಯ ಟ್ವೀಟ್‌ಗಳಿಗೆ ಕಾರಣವಾಗಿದೆ. ಅಂತಹ ಕೆಲವು ತಮಾಷೆಯ ಟ್ವೀಟ್‌ಗಳು ಇಲ್ಲಿವೆ..

ಪೂಜಾಳ ಜನ್ಮದಿನ

ಮೇ 22 ಪೂಜಾಳ ಹುಟ್ಟುಹಬ್ಬ. ಅದೀಗ ಇಡೀ ಜಾಮಿಯಾ ವಿಶ್ವವಿದ್ಯಾಲಯಕ್ಕೆ ಗೊತ್ತಾಯಿತು. ಹೇಗೆ ಊಹಿಸಿ? ತಂತ್ರಜ್ಞಾನಿ ಪ್ರೇಮಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವೆಬ್‌ಸೈಟ್‌ಅನ್ನೇ ಹ್ಯಾಕ್ ಮಾಡಿ ಹ್ಯಾಪಿ ಬರ್ಥಡೇ ಪೂಜಾ ಎಂದು ಬರೆದಿದ್ದಾನೆ. ಮೆಚ್ಚುವಂತಿದೆ ಅಲ್ಲವೇ? ಎಂದು ಟ್ವಿಟ್ಟರಿಗರೊಬ್ಬರು ಹೇಳಿದ್ದಾರೆ.

ಅವನನ್ನು ಮದುವೆಯಾಗಲಿ

ವೆಬ್‌ಸೈಟ್ ಹ್ಯಾಕ್ ಮಾಡಿ 'ಹ್ಯಾಪಿ ಬರ್ಥಡೇ ಪೂಜಾ' ಎಂದು ಬರೆದಿರುವ ಮಹಾಶಯನನ್ನು ಪೂಜಾ ಮದುವೆಯಾಗಬೇಕು ಎಂದು ಒಸಾಮಾ ಅಶ್ರಫ್ ಎಂಬುವವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಕಾನೂನೂ ಹಾಗೂ ಕಾರ್ಮಿಕ ಸಚಿವಾಲಯಗಳ ವೆಬ್‌ಸೈಟ್‌ಗಳು ಸೈಬರ್ ದಾಳಿಗೆ ಒಳಗಾಗಿದ್ದವು. ಇದು ದೇಶದ ಸೈಬರ್ ವ್ಯವಸ್ಥೆಯ ಭದ್ರತೆಯ ಕುರಿತು ಆತಂಕ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+