ಭಾರತದಲ್ಲಿ ಜೈಷ್ ಉಗ್ರರಿಂದ ದೊಡ್ಡ ದಾಳಿಗೆ ಸಂಚು: ಗುಪ್ತಚರ ಮಾಹಿತಿ

ನವದೆಹಲಿ, ಏ.29: ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳ ನಿಖರ ಸಂಪರ್ಕವಿದೆ ಹಾಗಾಗಿ ಭಾರತದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.

ಗೃಹ ಸಚಿವಾಲ ನೀಡಿದ ವರದಿ ಪ್ರಕಾರ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳು ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಗುಪ್ತ ಸಭೆ ನಡೆಸಿದೆ. ಐಎಸ್‌ಐ ಗಳು ಕಾಶ್ಮೀರದಲ್ಲಿ ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿಯನ್ನು ಮಾಡಲು ಹೊಂಚುಹಾಕಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದೆ.

ಜೈಷ್‌-ಎ-ಮೊಹಬ್ಬದ್ ಹಾಗೂ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ನ್ಯಾಟೊ ಮಿಲಿಟರಿ ಫೋರ್ಸ್ ವಿರುದ್ಧ ಫೈಟ್ ಮಾಡುತ್ತಿದೆ. ಇದೀಗ ಪಾಕಿಸ್ತಾನ ಐಎಸ್‌ಐ ಹಾಗೂ ಜೈಷ್ ಸಂಘಟನೆಗಳು ಮತ್ತೊಂದು ದಾಳಿ ನಡೆಸಲು ಒಗ್ಗೂಡಿವೆ ಎಂದು ಎಚ್ಚರಿಕೆ ನೀಡಿದೆ.

Jaish-e-Mohammad Islamic State terrorists planning fidayeen attacks in India

ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 250ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದರು. ಅದಕ್ಕೂ ಮುನ್ನ ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಇದೀಗ ಗುಪ್ತಚರ ಇಲಾಖೆ ಮಾಹಿತಿಯು ಆತಂಕವನ್ನುಂಟುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+