ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಮೋದಿ ಉದ್ಘಾಟಿಸಿದ ನೇತಾಜಿ ಪ್ರತಿಮೆ ವಿಶೇಷತೆಗಳೇನು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ರಾಷ್ಟ್ರರಾಜಧಾನಿಯ ಇಂಡಿಯಾ ಗೇಟ್‌ನಲ್ಲಿ ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಗುರುವಾರ ಸಂಜೆ 7 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.

ಈ ವೇಳೆ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ 28 ಅಡಿ ಎತ್ತರದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗಿದ್ದು, ಅದನ್ನು ಪ್ರಧಾನಿ ಅನಾವರಣಗೊಳಿಸಿದರು. 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಬ್ಲಾಕ್‌ನಿಂದ ನೇತಾಜಿ ಸುಭಾಷ್ ಅವರ ಭವ್ಯವಾದ ಪ್ರತಿಮೆಯನ್ನು ಕೆತ್ತಲಾಗಿದೆ.

ನವದೆಹಲಿಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿನವದೆಹಲಿಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಶಿಲ್ಪಿಗಳ ತಂಡವು 26,000 ಮಾನವ-ಗಂಟೆಗಳ ಸಮಯವನ್ನು ತೆಗೆದುಕೊಂಡು ಅದ್ಭುತ ಕಲಾ ಪ್ರತಿಮೆಯನ್ನು ಕೆತ್ತಿದ್ದಾರೆ. ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ ನೇತಾಜಿ ಪ್ರತಿಮೆಯು 65 ಮೆಟ್ರಿಕ್ ಟನ್ ತೂಕವನ್ನು ಹೊಂದಿದೆ. ಅದೇ ಪ್ರತಿಮೆಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.

Interesting Facts about Netaji Statue at India Gate

ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಪ್ರತಿಮೆ ವಿಶೇಷತೆಗಳೇನು?

* ತೆಲಂಗಾಣದ ಖಮ್ಮಮ್‌ನಿಂದ ನವದೆಹಲಿಗೆ ದೈತ್ಯ ಗ್ರಾನೈಟ್ ಕಲ್ಲನ್ನು ಸಾಗಿಸುವುದಕ್ಕಾಗಿ 140 ಚಕ್ರಗಳನ್ನು ಹೊಂದಿರುವ 100 ಅಡಿಯ ಟ್ರಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಅದೇ ಟ್ರಕ್ ನಲ್ಲಿ 1665 ಕಿ. ಮೀಟರ್ ದೂರದವರೆಗೆ ಕಲ್ಲನ್ನು ಸಾಗಿಸಲಾಗಿತ್ತು.

* ಈ ಪ್ರತಿಮೆಯನ್ನು ಸಂಪೂರ್ಣ "ಸಾಂಪ್ರದಾಯಿಕ ತಂತ್ರಗಳು ಮತ್ತು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಕೈಯಿಂದಲೇ ಕೆತ್ತಲಾಗಿದೆ.

* ಮೈಸೂರು ಮೂಲದ ಅರುಣ್ ಯೋಗಿರಾಜ್ ನೇತೃತ್ವದಲ್ಲಿ ಶಿಲ್ಪಿಗಳ ತಂಡವು ಈ ಪ್ರತಿಮೆಯನ್ನು ಕೆತ್ತಿದೆ.

* ಇದೇ ವರ್ಷದ ಆರಂಭದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ 125ನೇ ಜನ್ಮದಿನದ ಅಂಗವಾಗಿ ಜನವರಿ 23ರ ಪರಾಕ್ರಮ್ ದಿವಸ್ ಅನ್ನು ಆಚರಿಸಲಾಗುತ್ತದೆ. ಅದೇ ದಿನ ಪ್ರಧಾನಿ ಮೋದಿ, ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ಸ್ಥಳದಲ್ಲಿಯೇ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

* ನೇತಾಜಿಯ "ಋಣ"ದ ಸಂಕೇತವಾಗಿ ಇಂಡಿಯಾ ಗೇಟ್‌ನಲ್ಲಿ ಗ್ರಾನೈಟ್‌ನಿಂದ ಮಾಡಿದ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಜನವರಿ 21ರಂದು ಭರವಸೆ ನೀಡಿದ್ದರು.

* ನೇತಾಜಿ ಪ್ರತಿಮೆಯ ಅನಾವರಣಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಮಣಿಪುರಿ ಶಂಖ್ ವಾದಯಂ ಮತ್ತು ಕೇರಳದ ಸಾಂಪ್ರದಾಯಿಕ ಪಂಚ ವಾದಯಂ ಮತ್ತು ಚಂದದೊಂದಿಗೆ ಸ್ವಾಗತಿಸಲಾಗಿತ್ತು.

* ಈಗ ಅನಾವರಣಗೊಂಡ ನೇತಾಜಿಯವರ ಪ್ರತಿಮೆಯು ಐಎನ್‌ಎ ಸಾಂಪ್ರದಾಯಿಕ ಗೀತೆಯಾದ ಕದಮ್ ಕದಮ್ ಬಧಯೇಜಾದ ಸದ್ದನ್ನು ಹೊಂದಿರುತ್ತದೆ.

* ನೇತಾಜಿ ಸುಭಾಷ್ ಚಂದ್ರ ಭೋಸ್ ಜೀವನದ ಕುರಿತು ವಿಶೇಷವಾಗಿ ರಚಿಸಲಾಗಿರುವ 10 ನಿಮಿಷಗಳ ಡ್ರೋನ್ ಪ್ರದರ್ಶನವನ್ನು ಇಂಡಿಯಾ ಗೇಟ್‌ನಲ್ಲಿ ಸೆಪ್ಟೆಂಬರ್ 9, 10 ಮತ್ತು 11ರಂದು ರಾತ್ರಿ 8 ಗಂಟೆಗೆ ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ಉತ್ಸವ ಮತ್ತು ಡ್ರೋನ್ ಪ್ರದರ್ಶನ ಎರಡಕ್ಕೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ.

English summary
Interesting Facts about Netaji Subhash Chandra Bose Statue at New Delhi India Gate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X