ಕಬೀರ್ ಸಿಂಗ್ ಸಿನಿಮಾದಿಂದ ಪ್ರೇರಿತನಾಗಿ ಈ ವ್ಯಕ್ತಿ ಏನು ಮಾಡ್ತಿದ್ದ ಗೊತ್ತಾ?
ನವದೆಹಲಿ, ಮೇ 30: ಮೂಳೆ ತಜ್ಞ ಎಂದು ಹೇಳಿಕೊಂಡು ಡೇಟಿಂಗ್ ವೆಬ್‌ಸೈಟ್‌ಗಳ ಮೂಲಕ ಪರಿಚಯವಾಗಿ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಕಬೀರ್ ಸಿಂಗ್ ಸಿನಿಮಾದಿಂದ ಪ್ರೇರಿತನಾಗಿದ್ದ ಎಂದು ತಿಳಿದುಬಂದಿದೆ. ಆನಂದ್ ಕುಮಾರ್(31) (ಬಂಧಿತ ಆರೋಪಿ), ಆತನ ಜೊತೆಯಿದ್ದ ಪ್ರಿಯಂ ಯಾದವ್ ಎಂಬುವವನ್ನು ಬಂಧಿಸಲಾಗಿದೆ.
ಕುಮಾರ್ ಡೇಟಿಂಗ್ ವೆಬ್‌ಸೈಟ್‌ನಲ್ಲಿ ಡಾ. ರೋಹಿತ್ ಗುಜ್ರಾಲ್ ಎಂದು ಹೆಸರು ಬದಲಾಯಿಸಿಕೊಂಡಿದ್ದ, ಹಾಗೆಯೇ ನಿಜವಾದ ವೈದ್ಯರ ಜೊತೆ ಚಾಟಿಂಗ್ ಮಾಡುತ್ತಿದ್ದ, ತನ್ನ ಬ್ಯಾಂಕ್ ಖಾತೆಗೆ ಸಾವಿರ ರೂ ಜಮಾ ಮಾಡಿದರೆ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ಒಂದೊಮ್ಮೆ ಹಣ ನೀಡದಿದ್ದರೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಎಚ್ಚರಿಸಿದ್ದ.

ಆತ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಾಡೆಲ್ ಹಾಗೂ ನಟರಾಗಲು ಇಚ್ಛಿಸುವ ಸಾಕಷ್ಟು ಮಂದಿ ಹುಡುಗ, ಹುಡುಗಿಯರ ಪರಿಚಯ ಆತನಿಗಿತ್ತು.
ಅಲ್ಲಿರುವ ಯಾವುದೋ ಒಂದು ಯುವಕನ ಫೋಟೊವನ್ನು ತೆಗೆದು ತನ್ನ ಪ್ರೊಫೈಲ್‌ಪಿಕ್ ಮಾಡಿಕೊಳ್ಳುತ್ತಿದ್ದ. ಟಿಂಡರ್, ಬಂಬಲ್, ಜೀವನ್‌ಸಾಥಿ , ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಡಾ. ರೋಹಿತ್ ಗುಜ್ರಾಲ್ , ಮೂಳೆ ತಜ್ಞ ಎಂದು ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದ.
ಕಬೀರ್‌ಸಿಂಗ್ ಸಿನಿಮಾದಲ್ಲಿ ಶಾಹಿದ್ ಕಪೂರ್ ಮೂಳೆ ತಜ್ಞನಾಗಿ ಕಾಣಿಸಿಕೊಂಡಿದ್ದರು. ಮಹಿಳೆ ಪರಿಚಯವಾದ ನಂತರ ಮೊಬೈಲ್ ನಂಬರ್ ತೆಗೆದುಕೊಂಡು ಚಾಟ್ ಮಾಡಲು ಆರಂಭಿಸುತ್ತಾನೆ. ಬಳಿಕ ತಾಯಿ ಆರೋಗ್ಯ ಸರಿ ಇಲ್ಲ ಎಂದು ಕರೆ ಮಾಡುವುದು ನಿಲ್ಲಿಸುತ್ತಾನೆ.
ಸ್ವಲ್ಪ ದಿನಗಳ ವರೆಗೆ ವಿಡಿಯೋ ಕಾಲ್‌ಗಳನ್ನು ಅಟೆಂಡ್ ಮಾಡುವುದು ನಿಲ್ಲಿಸುತ್ತಾನೆ. ಬಳಿಕ ತಾನು ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ಖಾಸಗಿ ಫೋಟೊಗಳನ್ನು ಕಳುಹಿಸುವಂತೆ ಕೇಳುತ್ತಾನೆ.
ಆತ ಕಳೆದ ನಾಲ್ಕು ತಿಂಗಳಿನಿಂದ ಈ ದಂಧೆ ಮಾಡುತ್ತಿದ್ದು, ಇದುವರೆಗೂ ಸಾಕಷ್ಟು ಮಹಿಳೆಯರಿಗೆ ವಂಚನೆ ಮಾಡಿ, ಸುಮಾರು 5 ಲಕ್ಷ ರೂ.ವನ್ನು ದೋಚಿದ್ದಾನೆ.












Click it and Unblock the Notifications