ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪುನರಾರಂಭಕ್ಕೆ ಸಿದ್ದತೆ

ನವದೆಹಲಿ, ಏಪ್ರಿಲ್ 25: ಮೇ 3ಕ್ಕೆ ಲಾಕ್ ಡೌನ್ ತೆರವುಗೊಂಡ ನಂತರ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪುನರಾರಂಭಕ್ಕೆ ಬೇಕಾದ ಪೂರ್ವ ತಯಾರಿ ಆರಂಭವಾಗಿದೆ.

Recommended Video

      ನನ್ನ ತಂದೆ ಕೊರೂನ ಪಾಸಿಟಿವ್ , ನಮಗೆ ದಯವಿಟ್ಟು ನ್ಯಾಯ ಒದಗಿಸಿ | Oneindia Kannada

      ವಿಮಾನ ನಿಲ್ದಾಣ ಆರಂಭಗೊಂಡ ನಂತರ, ಪ್ರಯಾಣಿಕರನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಕುರಿತು ಕಾರ್ಯತಂತ್ರಗಳನ್ನು ರೂಪಿಸಲು, ಅಧಿಕಾರಿಗಳು ಈಗಾಗಲೇ ಚರ್ಚೆಯನ್ನು ನಡೆಸಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಮ್ಮ ಶಿಫಾರಸುಗಳನ್ನು ಕಳುಹಿಸಿದ್ದಾರೆ.

      ಡಿಐಎಎಲ್ ಮತ್ತು ಜಿಎಂಆರ್ ಗ್ರೂಪ್ ಜಂಟಿಯಾಗಿ ದೆಹಲಿ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಚೆಕ್-ಇನ್ ಹಾಲ್, ಸೆಕ್ಯುರಿಟಿ ಚೆಕ್ ಪ್ರದೇಶ ಮತ್ತು ಬೋರ್ಡಿಂಗ್ ಗೇಟ್ ನಲ್ಲಿ ಹೆಚ್ಚುವರಿ ಕ್ಯೂ ಮ್ಯಾನೇಜರ್ ಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

      Coronavirus: Indira Gandhi International Airport in Delhi gears up to handle post-lockdown challenges

      "ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ, ಕೇಂದ್ರ ಸರಕಾರದ ಮಾರ್ಗದರ್ಶಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ" ಎಂದು ಡಿಐಎಎಲ್ ಸಿಇಒ ವಿದೇ ಕುಮಾರ್ ಹೇಳಿದ್ದಾರೆ.

      ಕಳೆದ ಕೆಲವು ದಿನಗಳಿಂದ ವಿಮಾನ ನಿಲ್ದಾಣದ ಹೌಸ್ ಕೀಪಿಂಗ್ ವಿಭಾಗದಿಂದ ಪ್ರತೀ ದಿನ ಡೀಪ್ ಕ್ಲೀನಿಂಗ್ ಮಾಡಲಾಗುತ್ತಿದ್ದು, ಐನೂರು ಕಾರ್ಮಿಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

      ವಿಮಾನ ನಿಲ್ದಾಣ ಪುನರಾರಂಭಗೊಂಡ ನಂತರ, ಕ್ಯೂ ಪದ್ದತಿ ಇರುವುದಿಲ್ಲ. ಬದಲಿಗೆ, ಸಿಟ್ ಎಂಡ್ ವೇಟ್ ಪದ್ದತಿಯನ್ನು ಜಾರಿಗೆ ತರಲಾಗುವುದು. ಎಲ್ಲಾ ಪ್ರಯಾಣಿಕರು ಒಳಪ್ರವೇಶಿಸುವಾಗ ಕಡ್ಡಾಯವಾಗಿ ದೇಹದ ಉಷ್ಣತೆಯನ್ನು ಪರೀಕ್ಷಿಸಿಕೊಳ್ಲಬೇಕು.

      ಉಷ್ಣತೆ ಹೆಚ್ಚಾಗಿದ್ದಲ್ಲಿ ಪ್ರವೇಶ ನೀಡಲಾಗುವುದಿಲ್ಲ, ಮಾಸ್ಕ್ ಧರಿಸದಿದ್ದರೆ ಎಂಟ್ರಿ ಇರುವುದಿಲ್ಲ. ಒಂದು ಮೀಟರ್ ಅಂತರ ಇರುವಂತೆ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ಡಿಐಎಎಲ್ ಮತ್ತು ಜಿಎಂಆರ್ ಗ್ರೂಪ್ ಅಧಿಕಾರಿಗಳು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+