ಪ್ರಧಾನಿ ನರೇಂದ್ರ ಮೋದಿ ಮಾಸಿಕ ಸಂಬಳ ಇಷ್ಟಿದೆ!
ನವದೆಹಲಿ, ಮೇ 22: ದಾಖಲೆಯ ಜಯ ಸಾಧಿಸಿ, ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ ಎಷ್ಟು ಸಂಬಳ ಪಡೆಯಲಿದ್ದಾರೆ ಎಂದು ದೊಡ್ಡ ಮಟ್ಟದ ಕುತೂಹಲ ಹೊಂದಿರುವವರಿಗಾಗಿ ಇಲ್ಲೊಂದಿಷ್ಟು ಲೆಕ್ಕಾಚಾರದ ಮಾತು ಇದೆ.
ದೆಹಲಿಯ ಹೃದಯ ಭಾಗದಲ್ಲಿರುವ ರೇಸ್ ಕೋರ್ಟ್ ರಸ್ತೆಯಲ್ಲಿರುವ ನಂಬರ್ 7 ನಿವಾಸ ಇನ್ನು 5 ವರ್ಷ ಕಾಲ ''ಉಚಿತವಾಗಿ'' ನರೇಂದ್ರ ಮೋದಿ ಅವರದ್ದಾಗಲಿದೆ. ಅಂದಹಾಗೆ ಇಲ್ಲಿರುವುದು ಕೇವಲ 1 ಮನೆಯಲ್ಲ, 5 ನಿವಾಸಗಳ ಬೃಹತ್ ವಸತಿ ಸೌಕರ್ಯ ಇದಾಗಿದೆ. ಕಚೇರಿಯು ರೈಸೀನಾ ಹಿಲ್ಸ್ ನಲ್ಲಿರುವ ಸೌತ್ ಬ್ಲಾಕ್ ನಲ್ಲಿದೆ.

ಮನೆ, ಕಚೇರಿ ಆದ ಮೇಲೆ ಪಗಾರ ಎಷ್ಟಪ್ಪಾ ಅಂದರೆ ಅದು ಮೋದಿ ಕಾಲಕ್ಕೆ ಹೆಚ್ಚಾಗಲಿದೆ. ಪ್ರಧಾನಿಯ ಸಂಬಳ ತಿಂಗಳಿಗೆ 1.6 ಲಕ್ಷ ರೂ. ಮೂಲ ವೇತನ: 50,000. ಉಳಿದದ್ದಷ್ಟೂ ಇತರೆ ಭತ್ಯೆಗಳ ಲೆಕ್ಕದಲ್ಲಿ ಬರುತ್ತದೆ. ಇದರ ಜತೆಗೆ ಖಾಸಗಿ ಸಿಬ್ಬಂದಿ, ವಿಶೇಷ ವಿಮಾನ ಮತ್ತಿತರ ಸವಲತ್ತುಗಳು. ಇದು ಮಾಹಿತಿ ಕಾಯಿದೆಯಡಿ ಪಡೆದ ಮಾಹಿತಿಯಾಗಿದೆ.












Click it and Unblock the Notifications