ದೆಹಲಿಯಲ್ಲಿ ಬಿಸಿಗಾಳಿ ಮುಂದುವರಿಕೆ, ರೆಡ್ ಅಲರ್ಟ್ ಘೋಷಣೆ
ನವದೆಹಲಿ, ಜೂನ್ 10: ಹಲವೆಡೆ ಮಳೆಯಾಗಿದ್ದರೂ ಕೂಡ ದೆಹಲಿಯಲ್ಲಿ ಬಿಸಿಗಾಳಿ ಇನ್ನೂ ಮುಂದುವರೆದಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ದೆಹಲಿಯಲ್ಲಿ ಗರಿಷ್ಠ ತಾಪಮಾನ 46.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜಸ್ಥಾನ ಇನ್ನಿತರೆ ರಾಜ್ಯಗಳಲ್ಲಿ ತಾಪಮಾನ ವಿಪರೀತ ಹೆಚ್ಚಳವಾಗಿದ್ದು ಇದೀಗ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ವಿದರ್ಭದಲ್ಲಿ ತಾಪಮಾಣ ಹೆಚ್ಚಾಗಿದೆ.
ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಜೂನ್ 11-12 ಧೂಳು ಮಾರುತ ಬೀಸಲಿದ್ದು ಜೂನ್ 13ರಂದು ಮಳೆಯಾಗಲಿದ್ದು ತಾಪಮಾನ ಎರಡು ಡಿಗ್ರಿಯಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ವಾಯು ಚಂಡಮಾರುತ ಗುಜರಾತ್ ಕರಾವಳಿ ಭಾಗವನ್ನು ತಲುಪುವ ಹಂತದಲ್ಲಿದೆ. ಮುಂದಿನ 24 ಗಂಟೆಗಳಲ್ಲಿ ಗುಜರಾತ್, ಕರ್ನಾಟಕ, ಗೋವಾ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications