Breaking: ಕೇಂದ್ರದ ಮಾಜಿ ಸಚಿವ ಕುಮಾರಮಂಗಲಂ ಪತ್ನಿಯ ಬರ್ಬರ ಹತ್ಯೆ
ನವದೆಹಲಿ, ಜುಲೈ 07: ಕೇಂದ್ರದ ಮಾಜಿ ಸಚಿವ ಪಿ.ಆರ್. ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕುಮಾರಮಂಗಲಂ ಪತ್ನಿ ಕಿಟ್ಟು ಕುಮಾರಮಂಗಲಂ ಮಂಗಳವಾರ ರಾತ್ರಿ ಅವರ ವಸಂತ ವಿಹಾರದಲ್ಲಿರುವ ನಿವಾಸದಲ್ಲಿ ಹತ್ಯೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸೌತ್‌ವೆಸ್ಟ್ ಡಿಸಿಪಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪ್ರಕಾರ ಹತ್ಯೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ, ಮನೆಯಲ್ಲಿ ದರೋಡೆ ನಡೆಯುವ ಸಂದರ್ಭದಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ, ಈ ಘಟನೆ ನಡೆಯುವ ಸಮಯದಲ್ಲಿ 67 ವರ್ಷದ ಕಿಟ್ಟಿ ಮಂಗಲಂ ಹಾಗೂ ಮನೆ ಕೆಲಸದಾಕೆ ಇಬ್ಬರೇ ಮನೆಯಲ್ಲಿದ್ದರು.
ಕಿಟ್ಟಿ ಮಂಗಲಂ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ನಿರ್ವಹಿಸಿದ್ದರು. ಅವರ ಪುತ್ರ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಈ ಘಟನೆ ಕುರಿತು ಶೀಘ್ರವೇ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಪತಿ ಪಿಆರ್ ಕುಮಾರಮಂಗಲಂ ಅವರು ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ವಾಜಪೇಯಿ ಸರ್ಕಾರದಕ್ಕೂ ಸಚಿವರಾಗಿದ್ದರು.












Click it and Unblock the Notifications