ಸಮೀಕ್ಷೆಗೆ ಬ್ರೇಕ್ ಹಾಕಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ, ನ 9: ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಮತಗಟ್ಟೆ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ನವೆಂಬರ್ 11 ಬೆಳಗ್ಗೆ 7 ಗಂಟೆಯಿಂದ ಡಿಸೆಂಬರ್ 4 ಸಂಜೆ 5.30ರ ತನಕದ ಅವಧಿಯಲ್ಲಿ ಮತಗಟ್ಟೆ ಸಮೀಕ್ಷೆ ನಡೆಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ತನ್ನ ಆದೇಶದ ಪ್ರತಿಯನ್ನು ಕಳುಹಿಸಿ ಕೊಟ್ಟಿದೆ.

ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಆಯೋಗ ಈ ಆದೇಶ ಹೊರಡಿಸಿದೆ.

Election commission bans exit polls till December 4th

ಮಾಧ್ಯಮಗಳು ಮತದಾನದ ದಿನ ಮತದಾರರ ಸಂದರ್ಶನ ನಡೆಸುವುದು ಮತ್ತು ಚುನಾವಣಾಪೂರ್ವ ಸಮೀಕ್ಷೆಯ ವರದಿಯನ್ನು ಐದು ರಾಜ್ಯಗಳ ಚುನಾವಣೆ ನಡೆಯುವ ದಿನಾಂಕದ 48 ಗಂಟೆಗಳ ಮುನ್ನ ಪ್ರಕಟಿಸುವಂತಿಲ್ಲ ಎಂದು ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

1. ಛತ್ತೀಸಗಢ (ಒಟ್ಟು ಸ್ಥಾನಗಳು - 90)
ಚುನಾವಣೆ ನಡೆಯುವ ದಿನಾಂಕ : ನ 11 ಮತ್ತು ನ 19

2. ಮಧ್ಯಪ್ರದೇಶ (ಒಟ್ಟು ಸ್ಥಾನಗಳು - 230)
ಚುನಾವಣೆ ನಡೆಯುವ ದಿನಾಂಕ : ನ 25

3. ಮಿಜೋರಾಂ (ಒಟ್ಟು ಸ್ಥಾನಗಳು - 40)
ಚುನಾವಣೆ ನಡೆಯುವ ದಿನಾಂಕ : ಡಿ 4

4. ರಾಜಸ್ಥಾನ (ಒಟ್ಟು ಸ್ಥಾನಗಳು - 200)
ಚುನಾವಣೆ ನಡೆಯುವ ದಿನಾಂಕ : ಡಿ 1

5. ದೆಹಲಿ (ಒಟ್ಟು ಸ್ಥಾನಗಳು - 70)
ಚುನಾವಣೆ ನಡೆಯುವ ದಿನಾಂಕ : ಡಿ 4

ಮಿಜೋರಾಂ ಹೊರತು ಪಡಿಸಿ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಡಿಸೆಂಬರ್ ಎಂಟರಂದು ಮತ್ತು ಮಿಜೋರಾಂ ಫಲಿತಾಂಶ ಡಿಸೆಂಬರ್ 9ರಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+