ಥೈಲೆಂಡ್, ಮಲೇಷ್ಯಾ ಸುತ್ತಾಡಿದ್ದ ದೆಹಲಿ ವ್ಯಕ್ತಿಗೆ ಕೊರೊನಾ ಸೋಂಕು
ನವದೆಹಲಿ, ಮಾರ್ಚ್ 6: ಥೈಲೆಂಡ್, ಮಲೇಷ್ಯಾ ಪ್ರವಾಸ ಹೋಗಿದ್ದ ದೆಹಲಿ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ.
ದೇಶದಲ್ಲಿ ಕೊರೊನಾ ಪ್ರಕರಣ ಇದೀಗ 31ಕ್ಕೆ ಏರಿಕೆಯಾಗಿದೆ. ಎಲ್ಲಾ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಸಾರ್ವಜನಿಕ ಕಾರ್ಯಗಳು, ನೂರಾರು ಜನರು ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಕೊರೊನಾ ವೈರಸ್ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮೊದಲು ಚೀನಾದ ವುಹಾನ್ ನಗರದಲ್ಲಿ ಕಂಡುಬಂದಿತ್ತು. ಅಲ್ಲಿಂದ ಬೇರೆ ಬೇರೆ ದೇಶಗಳಿಗೆ ಹರಡಿತ್ತು. ಒಟ್ಟು ಇಟಲಿಯ 16 ವಿದೇಶಿಯರಿಗೆ ಕೊರೊನಾದಿಂದ ಬಳಲುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು 280 ಆರೋಗ್ಯ ಸಿಬ್ಬಂದಿಗೆ ತರಬೇತಿಯನ್ನು ನೀಡಿದೆ. ಇಂಡಿಯಾ-ಯುರೋಪಿಯನ್ ಯೂನಿಯನ್ ಸಮಿತ್‌ಗೆ ತೆರಳುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಥಳಗಿತಗೊಳಿಸಿದ್ದಾರೆ.
ಒಟ್ಟು 23 ಮಂದಿ ಇಟಲಿಯರು ಜೈಪುರಕ್ಕೆ ತೆರಳಿದ್ದು ಅದರಲ್ಲಿ ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಚೀನಾದಲ್ಲಿ ಇದುವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.












Click it and Unblock the Notifications