ಪತ್ನಿ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಅರವಿಂದ್ ಕೇಜ್ರಿವಾಲ್

ನವದೆಹಲಿ, ಫೆಬ್ರವರಿ 11: ಪ್ರೀತಿ ಹಾಗೂ ದ್ವೇಷದ ರಾಜಕಾರಣದ ನಡುವಿನ ಸ್ಪರ್ಧೆ ಎಂದು ಹೇಳಿಕೊಂಡು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೋರಾಟ ಮಾಡಿ ಗೆಲುವು ಸಾಧಿಸಿರುವ ಅರವಿಂದ್ ಕೇಜ್ರಿವಾಲ್ ಪತ್ನಿಯ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ನೀಡಿದ್ದಾರೆ.

ಪ್ರೀತಿಯ ಗೆಲುವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುವ ಸಲುವಾಗಿ ಪ್ರೇಮಿಗಳ ದಿನ ಫೆಬ್ರವರಿ 14ರಂದೇ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕೂಡ ನಿರ್ಧರಿಸಿದ್ದಾರೆ.

ಕೇಜ್ರಿವಾಲ್ ಪತ್ನಿ ಸುನಿತಾ ಹುಟ್ಟುಹಬ್ಬದ ದಿನವೇ ಒಳ್ಳೆಯ ಉಡುಗೊರೆ ನೀಡಿದ್ದಾರೆ.

Delhi CM Gave Birthday Gift To His Wife Via Election Victory

ಪ್ರಚಂಡ ಗೆಲುವಿಗೆ ಅರವಿಂದ ಕೇಜ್ರಿವಾಲ್ ಅವರು ಮತದಾರರು, ಕಾರ್ಯಕರ್ತರು ಹಾಗೂ ತಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ನನ್ನ ಮಡದಿಯ ಹುಟ್ಟುಹಬ್ಬ ಸಹ ಇಂದು, ನಾನು ಕೇಕ್ ತಿಂದಿದ್ದೇನೆ. ನಿಮಗೂ ಕೇಕ್ ತಿನ್ನಿಸುತ್ತೇನೆ' ಎಂದು ಹೇಳಿದರು.

ಕೇಜ್ರಿವಾಲ್ ಪತ್ನಿ ಸುನಿತಾ ಮೊದಲು ಐಆರ್ಎಸ್ ಅಧಿಕಾರಿಯಾಗಿದ್ದರು. ಪತಿ ಮುಖ್ಯಮಂತ್ರಿಯಾದ ಬಳಿಕ ಅವರು ವಾಲಂಟರಿ ರಿಟೈರ್‌ಮೆಂಟ್ ತೆಗೆದುಕೊಂಡಿದ್ದರು.
ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 8 ರಂದು ಚುನಾವಣೆ ನಡೆದಿತ್ತು. ಕಳೆದ ಬಾರಿ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ 67 ಸೀಟುಗಳನ್ನು ಗೆದ್ದಿತ್ತು.

ಈ ಬಾರಿ 63 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಈಗಾಗಲೇ 29 ಸೀಟುಗಳಲ್ಲಿ ಅಧಿಕೃತವಾಗಿ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ಈ ಬಾರಿ ಸ್ವಲ್ಪ ಹೆಚ್ಚು ಮತದಾನ ನಡೆದಿದೆ. ಶೇ 61.18ರಷ್ಟು ಮತದಾರರು ಮಾತ್ರ ಮತಚಲಾಯಿಸಿದ್ದರು. 2015ರಲ್ಲಿ ಎಎಪಿ 54.3% ಮತಗಳನ್ನು ಪಡೆದಿದ್ದರೆ, ಬಿಜೆಪಿಗೆ 32.2% ಮತಗಳು ಹಂಚಿಕೆಯಾಗಿದ್ದವು. ಕಾಂಗ್ರೆಸ್‌ಗೆ ಕೇವಲ 9.7% ಮತಗಳು ಸಿಕ್ಕಿದ್ದವು. ಇನ್ನು ಇತರರ ಪಾಲು 3.8% ಮಾತ್ರ.

ಕೇಜ್ರಿವಾಲ್ ದೆಹಲಿಯ ಜನತೆಗೆ 'ಐ ಲವ್‌ ಯೂ' ಹೇಳುವ ಮೂಲಕ ಜನರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+