ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ ಮುಂದೇನು?

By Srinath
|
Google Oneindia Kannada News

ನವದೆಹಲಿ, ಡಿ.6: ತ್ರಿಕೋನ ಸ್ಪರ್ಧೆ ಮೂಲಕ ಡಿಸೆಂಬರ್ ಚಳಿಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮೈಬೆವರು ತರಿಸಿರುವ ಆಮ್ ಆದ್ಮಿ ಪಕ್ಷವು ದೆಹಲಿಯ ರಾಜಕೀಯ ಲೆಕ್ಕಾಚಾರಗಳನ್ನು ಏರುಪೇರು ಮಾಡುವ ಹೊಸ್ತಿಲಲ್ಲಿದೆ.

ದಿಲ್ಲಿಯ ಮತದಾರ ಪ್ರಭುವೇನೋ ಶೇ. 70ರ ಗಡಿ ದಾಟಿ ಮತ ಚಲಾಯಿಸಿದ್ದಾನೆ. ಇದರಿಂದ ಮತದಾರರು ಒಂದು ಪಕ್ಷಕ್ಕೇ ಬಹುಮತ ತಂದುಕೊಡುತ್ತಾರೋ ಅಥವಾ ಗೊಂದಲಕ್ಕೀಡಾಗಿ ಮತ ಹಂಚಿಕೆಯಾಗಿ ಅತಂತ್ರ ವಿಧಾನಸಭೆ ನಿರ್ಮಾಣಕ್ಕೆ ಕಾರಣವಾಗುತ್ತಾರಾ? ಎಂಬ ಆತಂಕ ಎದುರಾಗಿದೆ. ಸರಳ ಬಹುಮತಕ್ಕೆ 36 ಸ್ಥಾನ ಬೇಕಾಗುತ್ತದೆ.

ಒಂದು ವೇಳೆ ರಾಷ್ಟ್ರ ರಾಜಧಾನಿಯಲ್ಲೇ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮುಂದೇನು ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ. ಇಲ್ಲಿ ಹಲವು ಸಾಧ್ಯತೆ/ಆಯ್ಕೆಗಳು ಗೋಚರಿಸುತ್ತಿವೆ. ಆದರೆ ರಾತ್ರಿ 8 ಗಂಟೆಯಾದರೂ ಸರದಿಯಲ್ಲಿ ನಿಂತಿದ್ದು ಮತದಾನ ಮಾಡಿರುವ ದಿಲ್ಲಿ ಮಂದಿ, ಅತಂತ್ರ ಮತದಾನ ಮಾಡಿರಲಾರರು ಎಂಬ ಅನಿಸಿಕೆಯೂ ಬಲವಾಗಿದೆ.

ಬಹುಮತವಲ್ಲದ ಗರಿಷ್ಠ ಸ್ಥಾನ ಗಳಿಸಿದರೆ

ಬಹುಮತವಲ್ಲದ ಗರಿಷ್ಠ ಸ್ಥಾನ ಗಳಿಸಿದರೆ

ಯಾವುದೇ ಪಕ್ಷವೇ ಆದರೂ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿದರೆ (ಅಂದರೆ ಬಹುಮತ ಗಳಿಸಿದರೆ ಅಂತಲ್ಲ; ಸರಳ ಬಹುಮತಕ್ಕಿಂತ ಕಡಿಮೆ ಗಳಿಸಿಯೂ ಗರಿಷ್ಠ ಸ್ಥಾನ ಗಳಿಸಿದರೆ) ಇತರೆ ಪಕ್ಷಗಳೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರಕಾರ ರಚಿಸಬಹುದು. ಅದೂ ಸಾಧ್ಯವಾಗದಿದ್ದರೆ ರಾಷ್ಟ್ರ ರಾಜಧಾನಿಯು ರಾಷ್ಟ್ರಪತಿ ಆಳ್ವಿಕೆಗೆ ಒಳಪಡುತ್ತದೆ.

6 ತಿಂಗಳಲ್ಲೇ ಲೋಕಸಭಾ ಚುನಾವಣೆ ಜತೆಗೆ ಜತೆಗೆ

6 ತಿಂಗಳಲ್ಲೇ ಲೋಕಸಭಾ ಚುನಾವಣೆ ಜತೆಗೆ ಜತೆಗೆ

ದಿಲ್ಲಿಯಂತಹ ಆಯಕಟ್ಟಿನ ರಾಜ್ಯದ ವಿಧಾನಸಭೆಯನ್ನು ಹೆಚ್ಚು ಕಾಲ ಅತಂತ್ರವಾಗಿಡುವುದು ಸಮಂಜಸವಲ್ಲ. ಸಂವಿಧಾನದಲ್ಲಿಯೂ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಅದು ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿ ಉಳಿಯುವಂತಿಲ್ಲ. ಡಿಸೆಂಬರ್ 17ಕ್ಕೆ ಈಗಿನ ವಿಧಾನಸಭೆಯ ಕಾಲಾವಧಿ ಮುಗಿಯುತ್ತದೆ. ಅಲ್ಲಿಂದ ಮುಂದಕ್ಕೆ 6 ತಿಂಗಳಲ್ಲೇ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಅಂದರೆ ಆ ವೇಳೆಗೆ ಲೋಕಸಭಾ ಚುನಾವಣೆಗಳೂ ನಡೆಯಲಿದ್ದು, ಅದರೊಟ್ಟಿಗೆ ದಿಲ್ಲಿ ವಿಧಾನಸಭೆ ಚುನಾವಣೆಯನ್ನೂ ಮತ್ತೆ ನಡೆಸಬಹುದಾಗಿದೆ.

ಡಿ. 18 ರೊಳಗೆ single largest party ಸರಕಾರ ರಚನೆ

ಡಿ. 18 ರೊಳಗೆ single largest party ಸರಕಾರ ರಚನೆ

ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಘೋಷಿಸಿದರೆ ಯಾವುದು single largest party ಆಗಿ ಹೊರಹೊಮ್ಮಿರುತ್ತದೋ ಅದನ್ನು ಸರಕಾರ ರಚಿಸುವಂತೆ ಆಹ್ವಾನಿಸಬಹುದು. ಇದು 1990ರಿಂದಲೂ ರೂಢಿಗತವಾದ ಪದ್ಧತಿಯಾಗಿದೆ. ಡಿಸೆಂಬರ್ 8 ರಂದು ಫಲಿತಾಂಶ ಹೊರಬಿದ್ದು ಡಿಸೆಂಬರ್ 18 ರೊಳಗಾಗಿ single largest party ಸರಕಾರ ರಚನೆ ಕಸರತ್ತನ್ನು ಮುಗಿಸಬೇಕಾಗುತ್ತದೆ. ಹಾಗಾದಲ್ಲಿ ಅಲ್ಲಿಯವರೆಗೂ ಹಾಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದ ಸಂಪುಟವೇ ಉಸ್ತುವಾರಿ ಸರಕಾರ ನಡೆಸಬೇಕಾಗುತ್ತದೆ.

ಸ್ಪಷ್ಟ ಬಹುಮತ ಗಳಿಸದ ಹೊರತು ಅಧಿಕಾರವಿಲ್ಲ

ಸ್ಪಷ್ಟ ಬಹುಮತ ಗಳಿಸದ ಹೊರತು ಅಧಿಕಾರವಿಲ್ಲ

ಆದರೆ ಚುನಾವಣೆಗೂ ಮುನ್ನ ಘೋಷಿಸಿರುವಂತೆ ಯಾವುದೇ ಪಕ್ಷವೂ (Congress, BJP ಮತ್ತು AAP) ಸ್ಪಷ್ಟ ಬಹುಮತ ಗಳಿಸದ ಹೊರತು ಅಧಿಕಾರದ ಚುಕ್ಕಾಣಿ ಹಿಡಿಯುವುದಿಲ್ಲ ಎಂದು ಘೋಷಿಸಿಕೊಂಡಿವೆ. ಹಾಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯೇ ಗಟ್ಟಿ. (Government of National Capital Territory of Delhi Act, 1991)

ದೆಹಲಿ ಆಡಳಿತ ಶೋಚನೀಯ

ದೆಹಲಿ ಆಡಳಿತ ಶೋಚನೀಯ

ಈಗಾಗಲೇ ಚುನಾವಣೆ ನಿಮಿತ್ತ ಕಳೆದ ಐದಾರು ತಿಂಗಳಿಂದ ರಾಷ್ಟ್ರ ರಾಜಧಾನಿಯಂತಹ ದಿಲ್ಲಿಯಲ್ಲಿ ಸರಕಾರ ಪರಿಣಾಮಕಾರಿಯಾಗಿ ಆಳ್ವಿಕೆ ನಡೆಸಿಲ್ಲ. ಇನ್ನು, ಮುಂದಿನ 6 ತಿಂಗಳ ಕಾಲವೂ ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಗೆ ಒಳಪಟ್ಟರೆ ದೆಹಲಿ ಆಡಳಿತ ಶೋಚನೀಯವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ರಾಷ್ಟ್ರಪತಿ ಆಡಳಿತ ಕಾಲದಲ್ಲಿ ದೈನಂದಿನ ಆಡಳಿತವಷ್ಟೇ ಸಾಗುತ್ತದೆ. ಯಾವುದೇ ಪ್ರಧಾನ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ.

English summary
Delhi assembly polls-2013- Hung assembly predicted what next?. First, the single largest party may form a coalition government with the support of other parties. If that fails to materialize, Delhi may come under President's Rule, in which case it will have to vote in fresh elections within six months from December 17. Tha is along with lok sabha polls 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X