ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: ನೀರಿನ ಬಿಲ್ ಮೇಲಿನ ಬಡ್ಡಿ ಶೇ.100ರಷ್ಟು ಮನ್ನಾ; ಡಿಕೆಶಿ ಮಹತ್ವದ ಘೋಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ಈ ಹಿಂದೆ ಆಸ್ತಿ ತೆರಿಗೆ ಬಾಕಿದಾರರಿಗೆ ಗುಡ್‌ನ್ಯೂಸ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗ್ರಾಹಕರಿಗೆ ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ನೀರಿನ ಬಿಲ್ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿದೆ. ಈ ಸೌಲಭ್ಯವು ಮುಂದಿನ ಮೂರು ತಿಂಗಳು ಚಾಲ್ತಿಯಲ್ಲಿರಲಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಏಪ್ರಿಲ್ ನಿಂದ ಜೂನ್ 2026 ರವರೆಗೆ ಲಕ್ಷಾಂತರ ಬಿಡಬ್ಲ್ಯೂಎಸ್ಎಸ್‌ಬಿ (BWSSB) ಗ್ರಾಹಕರಿಗೆ ಸಂಪೂರ್ಣ ಬಡ್ಡಿ ಮನ್ನಾಗೆ ಅವಕಾಶ ನೀಡಿ ಬಿಲ್ ಕಟ್ಟಿಸಿಕೊಳ್ಳುವ ವ್ಯವಸ್ಥೆಯಾದ OTS (ಒನ್‌ ಟೈಮ್‌ ಸೆಟ್ಲ್‌ಮೆಂಟ್) ಯೋಜನೆಯನ್ನು ಘೋಷಿಸಿದ್ದಾರೆ. ಇದರಿಂದ ಈವರೆಗೆ ಯಾರೆಲ್ಲ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕಾವೇರಿ ನೀರಿನ ಗ್ರಾಹಕರಿಗೆ ಅನುಕೂಲ ಒದಗಿಸಲಿದೆ.

BWSSB OTS Scheme

ಯುಗಾದಿ ಹಬ್ಬದ ಬೆನ್ನಲ್ಲೆ ಸರ್ಕಾರ ಈ ಮಹತ್ವದ ಘೋಷಣೆಯನ್ನು ಸರ್ಕಾ ಮಾಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈ ಒಟಿಎಸ್ ಯೋಜನೆ ಜಾರಿಗೆ ಬರಲಿದೆ. ನೀರಿನ ಬಿಲ್‌ ಮೇಲೆ ಇರುವ ಎಲ್ಲ ಬಡ್ಡಿಯು ಮನ್ನಾ ಆಗಲಿದೆ. ಈ ಮೂಲಕ ಬಾಕಿ ಪಾವತಿಯಾಗುತ್ತದೆ. ಮಂಡಳಿಗೆ ಬರಬೇಕಿದ್ದ ಬಿಲ್ ಸಂಗ್ರಹಿಸಲು ಯೋಜಿತ ದಾರಿ ಲಭ್ಯವಾದಂತಾಗುತ್ತದೆ. ಇದರಿಂದ ಗ್ರಾಹಕರಿಗೂ ಹೆಚ್ಚಿನ ಲಾಭವಾಗಲಿದೆ.

2026 ಏಪ್ರಿಲ್ ನಿಂದ ಜೂನ್ ರವರೆಗೆ ಮೂರು ಒಟಿಎಸ್‌ ಅಡಿ ಬಾಕಿ ಬಿಲ್ ಪಾವತಿಗೆ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಬಾಕಿ ಬಿಲ್‌ ಎಲ್ಲ ಮೊತ್ತ ಪಾವತಿಸುವವರು ಈ ಶೇಕಡಾ 100ರಷ್ಟು ಬಡ್ಡಿ ಮನ್ನ ಸೌಲಭ್ಯ ಪಡೆಯುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಜಲಮಂಡಳಿಗೆ ಬರಬೇಕಿರುವ ಬಾಕಿ ಬಿಲ್ ಮೊತ್ತವೆಷ್ಟು?

ಬೆಂಗಳೂರು ಜಲಮಂಡಳಿ ಮೂಲಗಳ ಪ್ರಕಾರ, ನಗರದಲ್ಲಿ ಸುಮಾರು 11 ಲಕ್ಷ ಕಾವೇರಿ ನೀರಿನ ಸಂಪರ್ಕಗಳ ಇವೆ. ಅದರಲ್ಲಿ ಸುಮಾರು 5.11 ಲಕ್ಷ ಗ್ರಾಹಕರು ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಅರ್ಧದಷ್ಟು ಸಂಗ್ರಹ ನಿಂತು ಹೋಗಿದೆ. ಕಳೆದ ತಿಂಗಳು ಫೆಬ್ರವರಿ ಹೊತ್ತಿಗೆ ಒಟ್ಟು ಬಾಕಿ 851.33 ಕೋಟಿ ರೂಪಾಯಿ ಕೋಟಿಗಳಷ್ಟಿದೆ. ಇದರಲ್ಲಿ 539.43 ಕೋಟಿ ರೂಪಾಯಿ ಹಣ ಅಸಲು ಮೊತ್ತವಾಗಿದೆ. ಅದರ ಬಡ್ಡಿ ಒಟ್ಟು 311.90 ಕೋಟಿ ರೂಪಾಯಿ ಆಗುತ್ತದೆ.

ಬೆಂಗಳೂರು ಜಲಮಂಡಳಿ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಜೊತೆಗೆ ಮಂಡಳಿಯ ಆರ್ಥಿಕ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಈ ಒಟಿಎಸ್ ಯೋಜನೆ ಜಾರಿಗೆ ತರಲಾಗುತ್ತದೆ. ಇದು ಕೇವಲ ಗೃಹ ಬಳಕೆಗೆ ಮಾತ್ರವಲ್ಲದೇ ಯಾರೆಲ್ಲ ವಾಣಿಜ್ಯ ಮತ್ತು ಕೈಗಾರಿಕಾ ದೃಷ್ಟಿಯಿಂದ ಕಾವೇರಿ ಸಂಪರ್ಕ ಪಡೆದಿದ್ದಾರೋ ಅವರಿಗೆಲ್ಲವು ಅನುಕೂಲ ಆಗಲಿದೆ. ಸರಿಯಾದ ಖಾತೆ ಸಮನ್ವಯದ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿ ಬಿಲ್ ಸಂಗ್ರಹಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಬಿಲ್ ಪಾವತಿಸುವುದು ಹೇಗೆ, ಎಲ್ಲಿ?

ಬೆಂಗಳೂರು ಜಲಮಂಡಳಿಯು ಬಾಕಿ ಬಿಲ್ ಪಾವತಿದಾರರು RR ಸಂಖ್ಯೆ, ಅಸಲು ಮೊತ್ತ, ಮನ್ನಾ ಮಾಡಿದ ಬಡ್ಡಿ ಮತ್ತು ಅಂತಿಮ ಪಾವತಿಸಬೇಕಾದ ಮೊತ್ತ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ನೀಡುತ್ತದೆ. ಅದರ ಆಧಾರದಲ್ಲಿ ಗ್ರಾಹಕರು BWSSB ಕಿಯೋಸ್ಕ್‌ಗಳು, ಅಧಿಕೃತ ಆನ್‌ಲೈನ್ ಪೋರ್ಟಲ್ ಮತ್ತು ಇತರ ಡಿಜಿಟಲ್ ಪಾವತಿಯ ಹಾಲಿ ವಿಧಾನಗಳ ಮೂಲಕ ನೀರಿನ ಬಿಲ್ ಕಟ್ಟಿ ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದು.

5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲ

ಈ ಒಟಿಎಸ್ ವ್ಯವಸ್ಥೆಯಿಂದಾಗಿ ಬಾಕಿ ಬಿಲ್ ಉಳಿಸಿಕೊಂಡ ಜಲಮಂಡಳಿಯ ಸುಮಾರು 5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಪ್ರಯೋಜನ ಸಿಗುತ್ತದೆ. ಆರ್ಥಿಕವಾಗಿ ಸಹಾಯ ಮಾಡಲಿದೆ. ಈ ನಿರ್ಧಾರದಿಂದಾಗಿ ಜಲಮಂಡಳಿಗೆ ಬರಬೇಕಿದ್ದ ಸುಮಾರು 311 ಕೋಟಿ ರೂಪಾಯಿ ಬಡ್ಡಿ ಮನ್ನಾಗಲಿದೆ. ಸರ್ಕಾರ ಅಸಲು ಬಿಲ್ ಮಾತ್ರ ಪಡೆಯಲಿದೆ. ಆದ್ದರಿಂದ ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸರ್ಕಾರ ಆಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+