ಕೊರೊನಾದಿಂದ ಸಿಆರ್‌ಪಿಎಫ್ ಅಧಿಕಾರಿ ಸಾವು: ಬೆಟಾಲಿಯನ್ ಬಂದ್
ನವದೆಹಲಿ, ಏಪ್ರಿಲ್ 29: ಕೊರೊನಾ ವೈರಸ್‌ನಿಂದ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಬೆಟಾಲಿಯನ್ ಸೀಲ್ ಮಾಡಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ 55 ವರ್ಷದ ಅಧಿಕಾರಿಯೊಬ್ಬರು ಕೊವಿಡ್ 19ನಿಂದ ಮಂಗಳವಾರ ಮೃತಪಟ್ಟಿದ್ದರು.ಸಹಾಯಕ ಪೊಲೀಸ್ ನಿರೀಕ್ಷಕ ಶ್ರೇಣಿಯ ಅಧಿಕಾರಿಗೆ ಕೆಲವು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿದ್ದು, ಸಪ್ಧರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ದೆಹಲಿಯ 31ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣವಿದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಟಾಲಿಯನ್‌ನಲ್ಲಿರುವ 23 ಅಧಿಕಾರಿಗಳು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್ ನಲ್ಲಿಯೂ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಇದುವರೆಗೆ 46 ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 257 ಮಂದಿಯ ವರದಿ ಬರುವುದು ಬಾಕಿ ಇದೆ. ಬೆಟಾಲಿಯನ್‌ನಲ್ಲಿ ಒಟ್ಟು 1,100 ಮಂದಿ ಇದ್ದಾರೆ. ಬೆಟಾಲಿಯನ್‌ನ್ನು ಸೀಲ್ ಮಾಡಲಾಗಿದೆ.
ಕೊರೊನಾವೈರಸ್‌ನಿಂದ ಅಧಿಕಾರಿ ಮೃತಪಟ್ಟ ಬಳಿಕ ಗೃಹ ಸಚಿವಾಲಯದ ಅಧಿಕಾರಿಗಳು ಗಲಾಟೆ ಮಾಡಿದ್ದರು. ಮೊದಲು ಉಪ ನಿರೀಕ್ಷಕ ಮೊಹಮ್ಮದ್ ಇಕರಾಮ್ ಅವರ ಬೆಟಾಲಿಯನ್‌ನ ನರ್ಸಿಂಗ್ ಸಹಾಯಕರೊಬ್ಬರಲ್ಲಿ ಕೊವಿಡ್ ಕಾಡಿಸಿಕೊಂಡಿತ್ತು.












Click it and Unblock the Notifications