ಮನೆಯ ಪಾರ್ಕಿಂಗ್‌ನಲ್ಲೇ ಹಣೆಗೆ ಗನ್ ಇಟ್ಟು ದಂಪತಿಯ ದರೋಡೆ

ನವದೆಹಲಿ, ಜು.2: ಮನೆಯ ಪಾರ್ಕಿಂಗ್ ಪ್ರದೇಶದಲ್ಲೇ ಗನ್ ತೋರಿಸಿ ದರೋಡೆ ಮಾಡಿರುವ ದೃಶ್ಯವು ರಾಷ್ಟ್ರ ರಾಜ್ಯದ ಜನರಲ್ಲಿ ಭಯ ಹುಟ್ಟಿಸಿವೆ.

ಪತ್ನಿಯ ತವರುಮನೆಯಿಂದ ಮನೆಗೆ ವಾಪಸಾಗಿ ಕಾರನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲು ಬಂದಾಗ ನಾಲ್ವರು ದುಷ್ಕರ್ಮಿಗಳು ತಲೆಗೆ ಗನ್ ಹಿಡಿದು ವ್ಯಕ್ತಿಯೊಬ್ಬರ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಕಾರಿನೊಳಗಿದ್ದ ಮಗು ಹಾಗೂ ಪತ್ನಿಯ ಮೇಲೆ ದುಷ್ಕರ್ಮಿಗಳು ಯಾವುದೇ ಹಲ್ಲೆ ನಡೆಸದಿರುವುದು ಸಮಾಧಾನದ ವಿಷಯವಾಗಿದೆ. ಇದೆಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದೊರೆತಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ.

Couple robbed at gun point at National capital

ಮಧ್ಯರಾತ್ರಿ ಮನೆಗೆ ಬರುತ್ತಿದ್ದಂತೆ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಹಾಗೂ ಮನೆಯ ಎಲ್ಲಾ ಗೇಟುಗಳು ತೆರೆದಿದ್ದರಿಂದ ಮನೆಯನ್ನು ಪ್ರವೇಶಿಸುವ ಬದಲಿಗೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದರೋಡೆಗೆ ಒಳಗಾದ ವ್ಯಕ್ತಿ ದೂರು ನೀಡಿದ್ದಾರೆ.

ಪೊಲೀಸರು ವಿಶೇಷ ತಂಡದ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಮುಸುಕುಧಾರಿಗಳಾಗಿದ್ದರಿಂದ ದುಷ್ಕರ್ಮಿಗಳ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಗನ್ ತೋರಿಸಿ ನಡೆಸುತ್ತಿರುವ ಈ ರೀತಿಯ ದರೋಡೆ ದೆಹಲಿಗರ ಆತಂಕಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+