ಈ ಚಿತ್ರಗಳೇ ಹೇಳುತ್ತಿವೆ ರಾಹುಲ್ ಗಾಂಧಿಯ ಧರ್ಮ

ನವ ದೆಹಲಿ, ನವೆಂಬರ್ 30: ರಾಹುಲ್ ಗಾಂಧಿ ಅವರ ಧರ್ಮ ಯಾವುದು? ಎರಡು ದಿನದಿಂದ ದೇಶಾದ್ಯಂತ ಕೇಳಲಾಗುತ್ತಿರುವ ಪ್ರಶ್ನೆ ಇದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ಅವರ ಸೋಮನಾಥ ದೇವಾಲಯ ಭೇಟಿ.

ರಾಹುಲ್ ಗಾಂಧಿ ಅವರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ 'ನಾನ್ ಹಿಂದೂ' (ಹಿಂದೂ ಅಲ್ಲದವರು ಹೆಸರು ಬರೆಯಲು ಇರುವ ಪುಸ್ತಕ) ರಿಜಿಸ್ಟರ್ ನಲ್ಲಿ ತಮ್ಮ ಹೆಸರು ಬರೆದಿದ್ದಾರೆ ಎಂಬುದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ವಾದ.

ಆದರೆ ಕಾಂಗ್ರೆಸ್ ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಿದೆ. ರಾಹುಲ್ ಗಾಂಧಿ ಅವರ ಮಾಧ್ಯಮ ಸಹಾಯಕರು ಮಾಡಿದ ಎಡವಟ್ಟಿನಿಂದ ಹೀಗಾಗಿದೆ. ಅವರು ಶಾಸ್ತ್ರಬದ್ಧ ಹಿಂದೂ ಎಂದು ಕಾಂಗ್ರೆಸ್ ಅವರ ವಾದ. ಅವರ ವಾದಕ್ಕೆ ಕೆಲವು ಚಿತ್ರಗಳನ್ನೂ ಕಾಂಗ್ರೆಸ್ ಬಿಡುಗಡೆ ಮಾಡಿದೆ.

Congress releases photos that shows Rahul Gandhi is a Hindu

ತಂದೆ ರಾಜೀವ್ ಗಾಂಧಿ ಅವರ ತೊಡೆ ಮೇಲೆ ಕೂತ ಹೋಮದಲ್ಲಿ ಭಾಗವಹಿಸಿದ್ದ ಬಾಲ ರಾಹುಲ್ ಗಾಂಧಿಯ ನಾಮಕರಣದ ಚಿತ್ರ. ಪ್ರಿಯಾಂಕ ಗಾಂಧಿ ಅವರ ಮದುವೆ ಸಮಯದಲ್ಲಿ ಶಾಸ್ತ್ರಗಳನ್ನು ಪೂರೈಸುತ್ತಿರುವ ಚಿತ್ರ ಹಾಗೂ ರಾಜೀವ್ ಗಾಂಧಿ ಅವರಿಗೆ ತರ್ಪಣ ಕೊಡುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ಮಾಧ್ಯಮದ ಮುಂದೆ ಹಿಡಿದು ಬಿಜೆಪಿಯ ಮೊಂಡು ವಾದವನ್ನು ಮೂಲೆಗೆ ತಳ್ಳಿದೆ.

ಈಗ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಹುಲ್ ಗಾಂಧಿ ಅವರನ್ನು ಧರ್ಮದ ಆಧಾರದಲ್ಲಿ ಹಣಿಯಲು ಬಲೆ ಹೆಣೆದಿದ್ದ ಬಿಜೆಪಿಗೆ ಮುಖಬಂಗ ಉಂಟುಮಾಡಿದೆ.

ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಹಲವು ಬಿಜೆಪಿಯ ಟಾಪ್ ಮುಖಂಡರೆಲ್ಲ ರಾಹುಲ್ ಗಾಂಧಿ ಅವರ ಧರ್ಮದ ಕುರಿತು ಪ್ರಶ್ನೆಗಳನ್ನು ಎತ್ತಿ ಹಿಯಾಳಿಸಿದ್ದರು ಆದರೆ ಈಗ ಈ ಚಿತ್ರಗಳು ಅವರ ಬಾಯಿ ಮುಚ್ಚಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+