ಮೋದಿ ಆಹ್ವಾನ ತಿರಸ್ಕರಿಸಿದ 8ರ ಬಾಲಕಿ: ಕಾರಣವೇನು?

ನವದೆಹಲಿ, ಮಾರ್ಚ್ 9: ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸಿ ಗೌರವಕ್ಕೆ ಪಾತ್ರರಾಗುವಂತೆ ಮೋದಿ ಅವರು ನೀಡಿದ್ದ ಆಹ್ವಾನವನ್ನು 8ರ ಪೋರಿ ನಿರಾಕರಿಸಿದ್ದಾಳೆ.

Recommended Video

      Climate activist Licypriya Kangujam had turned down PM Modi's invitation | Climate Change | Modi

      ವಿಶ್ವ ಮಕ್ಕಳ ಪ್ರಶಸ್ತಿ , ಡಾ. ಎಪಿಜೆ ಅಬ್ದುಲ್ ಕಲಾಂ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿಪ್ರಿಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಮಣಿಪುರದ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಸ್ಫೂರ್ತಿದಾಯಕರಲ್ಲಿ ಒಬ್ಬರಾಗಿದ್ದರು.

      ಹವಾಮಾನ ಬದಲಾವಣೆ ನಿಯಂತ್ರಿಸುವ ಕುರಿತು ನಾನು ಇಟ್ಟ ಬೇಡಿಕೆಗಳನ್ನು ಸರ್ಕಾರ ಕೇಳಿಸಿಕೊಂಡಿಲ್ಲ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿದರೆ ಸರ್ಕಾರ ಅವುಗಳ ನಿಯಂತ್ರಣಕ್ಕೆ ಏನೂ ಕೂಡ ಮಾಡುತ್ತಿಲ್ಲ.

       Climate Activist Licypriya Kangujam Had Turned Down PM Modis Invitation

      ಇದು ಒಂದು ರೀತಿಯಲ್ಲಿ ಮುಖಕ್ಕೆ ಸೌಂದರ್ಯವರ್ಧಕ ಕ್ರೀಮ್ ಮುಖ ತೊಳೆದ ಬಳಿಕ ಅದು ಅಳಿಸಿ ಹೋಗುತ್ತದೆ. ಇದರ ಬದಲು ಮೋದಿ ಅವರು ನ್ನನ ಧ್ವನಿಯನ್ನು ಕೇಳಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾಳೆ.

      ಆದರೆ ಈ ಆಹ್ವಾನವನ್ನು ತಿರಸ್ಕರಿಸಿರುವ ಲಿಸಿಪ್ರಿಯಾ , ದೇಶದ ಸ್ಫೂರ್ತಿದಾಯಕ ಮಹಿಳೆಯರ ಪೈಕಿ ಒಬ್ಬಳನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು, ಮೋದಿ ಅವರೇ ನ್ನನ ಧ್ವನಿಯನ್ನು ಕೇಳಿಸಿಕೊಳ್ಳದೆ ಇದ್ದರೆ ಅಭಿಯಾನಕ್ಕೆ ನನ್ನ ಹೆಸರನ್ನು ಸೇರಿಸಬೇಡಿ. ಹಲವು ಬಾರಿ ಯೋಚಿಸಿದ ಬಳಿಕ ಈ ಗೌರವವನ್ನು ತಿರಸ್ಕರಿಸು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾಳೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+