ಲಡಾಖ್‌ನಲ್ಲಿ ಬಂಧಿಸಲಾಗಿರುವ ಚೀನಾ ಸೈನಿಕನ ಬಿಡುಗಡೆ ಸದ್ಯಕ್ಕಿಲ್ಲ

ನವದೆಹಲಿ, ಅಕ್ಟೋಬರ್ 20: ಲಡಾಖ್‌ನಲ್ಲಿ ಬಂಧಿಸಿರುವ ಚೀನಾ ಸೈನಿಕನನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎನ್ನಲಾಗಿದ್ದು ವಶಕ್ಕೆ ಪಡೆದ ಸೈನಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Chinese Soldier Captured In Ladakh’s Demchok Won’t be Returned For Next Few Days

ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಅವನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಲಡಾಖ್ ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ ನಡೆದಿರುವ ಕಾರಣ ತನಿಖಾ ಸಂಸ್ಥೆಗಳು ಗೂಢಚರ್ಯೆ ದೃಷ್ಟಿಕೋನದಿಂದ ತನಿಖೆ ಕೈಗೊಂಡಿವೆ. ಚೀನಾ ಸೇನೆ ಈ ಭಾಗದ ಭಾರತೀಯ ಸೈನ್ಯದ ತಾಣಗಳ ಮೇಲೆ ಬೇಹುಗಾರಿಕೆ ನಡೆಸಿರಬಹುದೆಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+