ಒಲಂಪಿಕ್ ಬಾಕ್ಸರ್ ಪಟು ವಿಜೇಂದರ್‌ಗೆ ಕಾಂಗ್ರೆಸ್ ಟಿಕೆಟ್
ನವದೆಹಲಿ, ಏ.23: ಒಲಂಪಿಕ್ ಪದಕ ವಿಜೇತ ಹಾಗೂ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಕ್ಷಿಣ ದೆಹಲಿ ಕ್ಷೇತ್ರದಿಂದ ವಿಜಯೇಂದರ್‌ಗೆ ಟಿಕೆಟ್ ದೊರೆತಿದ್ದು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕ್ಷೇತ್ರಕ್ಕೆ ಇನ್ನೋರ್ವ ಬಾಕ್ಸರ್ ಸುಶೀಲ್ ಕುಮಾರ್ ಹೆಸರೂ ಕೂಡ ಕೇಳಿಬಂದಿತ್ತು. ಕಾಂಗ್ರೆಸ್ ಕೇಂದ್ರ ಸಮಿತಿಗೆ ಸುಶೀಲ್ ಹೆಸರನ್ನೇ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಬದಲಾಯಿಸಿ ವಿಜೇಂದರ್ ಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಒಲಂಪಿಕ್ ಪದಕ ವಿಜೇತರಾಗಿರುವ ವಿಜೇಂದರ್ ವಿಶ್ವ ವ್ರೆಸ್ಲಿಂಗ್ ಲೀಗ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಯನ್ನೂ ಹೊಂದಿದ್ದಾರೆ.
ದಕ್ಷಿಣ ದೆಹಲಿಯಲ್ಲಿ ಸಿಖ್ ಮತಗಳು ಹೆಚ್ಚಿರುವುದರಿಂದ ಪಂಜಾಬ್ ಮೂಲದವರಾಗಿರುವ ವಿಜೇಂದರ್‌ಗೆ ಅಭ್ಯರ್ಥಿಯಾಗಿಸಲು ಕಾಂಗ್ರೆಸ್ ನಿರ್ಧರಿಸಿದೆ.












Click it and Unblock the Notifications