ಭ್ರೂಣದಲ್ಲೇ ಕೊರೊನಾ ಸೋಂಕು: ತಾಯಿಗೆ ನೆಗೆಟಿವ್, ನವಜಾತ ಶಿಶುವಿಗೆ ಪಾಸಿಟಿವ್

ನವದೆಹಲಿ, ಜುಲೈ 11: ತಾಯಿಗೆ ಕೊರೊನಾ ನೆಗೆಟಿವ್ ಬಂದಿದ್ದು, ಮಗು ಹುಟ್ಟುತ್ತಲೇ ಪಾಸಿಟಿವ್ ಬಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Recommended Video

      ಜನಸಾಮಾನ್ಯ Corona ಪರೀಕ್ಷೆ ಮಾಡಿಸೋದು ಬಹಳ ಕಠಿಣ | DR Ravindra Gowda | Oneindia Kannada

      ಇದು ವೈದ್ಯಲೋಕಕ್ಕೆ ಮತ್ತೊಂದು ಸವಾಲೆಸೆದಿದೆ.ಭ್ರೂಣದಲ್ಲೇ ಕೊರೊನಾ ಸೋಂಕು ತಗುಲಿರುವ ಮೊದಲ ಘಟನೆ ಇದಾಗಿದೆ.

      ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೊವಿಡ್-19 ನೆಗೆಟಿವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ.

      Baby Born To Delhi Woman Cured Of Covid-19 Tests Positive

      ಈ ಮಗುವಿನ ತಾಯಿಗೆ ಜೂ.11 ರಂದು ಕೊವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು.

      ಆದರೆ ಜು.7 ರಂದು ಆಕೆಗೆ ಕೊರೊನಾ ಸೋಂಕು ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು ಜು.08 ರಂದು ಹೆರಿಗೆಯಾಗಿತ್ತು, ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ.

      ವೈದ್ಯರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ. ಕೊವಿಡ್-19 ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+